(ಸಾಂದರ್ಭಿಕ ಚಿತ್ರ) 
ದೇಶ

ಟಿವಿ ನೋಡಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಪತಿ ಪತ್ನಿ ನಡುವೆ ಜಗಳ ಬರುವುದು ಸಾಮಾನ್ಯ. ಕೆಲವೊಮ್ಮೆ ಇಂತಹ ಜಗಳಗಳು ದಂಪತಿಗಳ ಜೀವನವನ್ನು ನಾಶ ಮಾಡಬಲ್ಲವು. ಎಷ್ಟೋ ಪ್ರಕರಣಗಳಲ್ಲಿ ಕ್ಷುಲ್ಲಕ ಕಾರಣಕ್ಕೆ...

ದುಬೈ: ಪತಿ ಪತ್ನಿ ನಡುವೆ ಜಗಳ ಬರುವುದು ಸಾಮಾನ್ಯ. ಕೆಲವೊಮ್ಮೆ ಇಂತಹ ಜಗಳಗಳು ದಂಪತಿಗಳ ಜೀವನವನ್ನು ನಾಶ ಮಾಡಬಲ್ಲವು. ಎಷ್ಟೋ ಪ್ರಕರಣಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದಿರುವ ದಂಪತಿಗಳ ಘಟನೆಗಳು ಇಂದು ನಮ್ಮ ಕಣ್ಣ ಮುಂದೆ ಕಾಣಸಿಗುತ್ತವೆ. ಇಂತಹ ಪ್ರಕರಣಗಳಿಗೆ ಉದಾಹರಣೆಯೆನ್ನುವಂತೆ ಸೌದಿ ಮೂಲದ ಪತಿಯೊಬ್ಬ ತನ್ನ ಪತ್ನಿ ಟಿ.ವಿ ಮುಂದೆ ಕುಣಿಯುತ್ತಾಳೆನ್ನುವ ಕಾರಣಕ್ಕೆ ವಿಚ್ಛೇದನ ನೀಡಿದ್ದಾನೆ.

ಸೌದಿ ಮೂಲದ ಅರಬ್ ನಿವಾಸಿಯಾಗಿರುವ ಪತಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವಾಹಿನಿಗಳೆಂದರೆ ಬಹಳ ಇಷ್ಟವಂತೆ. ಪತ್ನಿ ಸಹ ಧಾರ್ಮಿಕ ವಾಹಿನಿಗಳನ್ನೇ ವೀಕ್ಷಿಸಬೇಕೆನ್ನುವುದು ಆತನ ಇಚ್ಛೆಯಂತೆ. ಆದರೆ, ಈತನಿಗೆ ತದ್ವಿರುದ್ಧ ಆತನ ಪತ್ನಿ. ಆಕೆಗೆ ಸಂಗೀತ ಕಾರ್ಯಕ್ರಮಗಳೆಂದರೆ ಅತಿಯಾದ ಪ್ರೀತಿ.

ಹೀಗಾಗಿ ಪತಿ ಮನೆಯಿಂದ ಹೊರ ಹೋಗುತ್ತಿದ್ದಂತೆ ಸಂಗೀತವನ್ನಾಲಿಸುತ್ತದ್ದಳಲ್ಲದೇ, ಗಂಡನಿಗೆ ಕಾಣದಂತೆ ತನಗೆ ಇಷ್ಟವಾಗುವ ವಾಹಿನಿಗಳನ್ನು ವೀಕ್ಷಿಸುತ್ತಿದ್ದಳಂತೆ. ಒಂದು ದಿನ ಆಕೆಯ ಪತಿರಾಯ ಇದ್ದಕ್ಕಿದ್ದಂತೆ ಸಮಯಕ್ಕೆ ಮೊದಲೇ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಟಿ.ವಿಯಲ್ಲಿ ಬರುತ್ತಿದ್ದ ಸಂಗೀತವನ್ನು ಕೇಳಿಕೊಂಡು ಡ್ಯಾನ್ಸ್ ಮಾಡುತ್ತಿದ್ದನ್ನು ನೋಡಿದ್ದಾನೆ. ಇದರಿಂದ ಕೋಪಗ್ರಸ್ಥನಾದ ಆತ ಇದ್ದಕ್ಕಿದ್ದಂತೆ ಪತ್ನಿಗೆ ವಿಚ್ಛೇದನ ನೀಡಲು ತೀರ್ಮಾನಿಸಿ ಬಿಟ್ಟಿದ್ದಾನೆ.

ಪತ್ನಿ ಸಾಕಷ್ಟು ಬಾರಿ ಕೇಳಿಕೊಂಡರು ಅದಾವುದಕ್ಕೂ ಕಿವಿಗೊಡದೇ ವಿಚ್ಛೇದನ ತೀರ್ಮಾನವನ್ನು ಹಿಂಪಡೆಯದ ಈತ ತನ್ನ ಪತ್ನಿ ಕ್ಷಮಿಸಲಾರದ ತಪ್ಪೊಂದನ್ನು ಮಾಡಿದ್ದು, ವಿವಾಹ ಸಂದರ್ಭದಲ್ಲಿ ತಾನು ನೀಡಿದ್ದ ವಾಗ್ಧಾನವನ್ನು ತನ್ನ ಪತ್ನಿ ಮುರಿದಿದ್ದಾಳೆ. ವೈವಾಹಿಕ ಸಂಬಂಧಕ್ಕೆ ದ್ರೋಹ ಬಗೆದಿದ್ದಾಳೆಂದು ತನ್ನ ವಾದವನ್ನು ಮುಂದುವರೆಸಿದ್ದಾನೆಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!