ದೇಶ

ಹೈದರಾಬಾದ್‍ಗೆ ಟ್ರೂಜೆಟ್ ವಿಮಾನ

Vishwanath S
ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಗುರುವಾರ ವೈಮಾನಿಕ ಸೇವೆ ಆರಂಭಿಸುವುದಾಗಿ ಟ್ರೂಜೆಟ್ ಸಂಸ್ಥೆ ಹೇಳಿದೆ. 
ಬೆಂಗಳೂರಿನಿಂದ ಮಂಗಳೂರು, ಬಳ್ಳಾರಿ, ಹುಬ್ಬಳ್ಳಿಗೂ ಸಂಪರ್ಕ ಕಲ್ಪಿಸುವ ಸೇವೆ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಟರ್ಬೋ ಮೇಘಾ ಏರ್‍ವೇರ್ ಕಂಪೆನಿ ಎಂಡಿ ವಂಕಲಾಯಪತಿ ಉಮೇಶ್ ತಿಳಿಸಿದರು. 
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನ ಬೆಂಗ ಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.25ಕ್ಕೆ ಆಗಮಿಸಿ 4.50ಕ್ಕೆ ನಿರ್ಗಮಿಸಲಿದೆ. ಔರಂಗಾಬಾದ್(ಶಿರಡಿ) ಮತ್ತು ಬೆಂಗಳೂರು-ಹೈದರಾ ಬಾದ್‍ಗೂ ಸಂಪರ್ಕ ಕಲ್ಪಿಸಲಿದೆ. 'ಟೈಯರ್-1 ನಗರಗಳ ಜತೆಗೆ ಟೈಯರ್-2, 3 ನಗರಗಳನ್ನು ಸಂಪರ್ಕಿಸುವುದು ಗುರಿ ಕಂಪನಿ ಹೊಂದಿದೆ.
SCROLL FOR NEXT