ದೇಶ

ವಧುವಿಗಾಗಿ 2 ಸಾವಿರ ಮೈಲು ಪ್ರಯಾಣ ಮಾಡುವ ಯುವಕರು..!

Srinivasamurthy VN

ಚಂಡೀಗಡ: `ಸಾವಿರ ಸುಳ್ಳು ಹೇಳಿ ಮದುವೆ ಮಾಡಿಸಿ' ಎಂಬ ಮಾತೆಲ್ಲ ಇಲ್ಲಿಗೆ ಸಲ್ಲುವುದಿಲ್ಲ, ಇಲ್ಲೇನಿದ್ದರೂ ಸಾವಿರ ಮೈಲು  ಪ್ರಯಾಣ ಬೆಳೆಸಿ ಮದುವೆ ಯಾಗಬೇಕು!

ಇದು ಹರ್ಯಾಣದ ಗಂಡು ಮಕ್ಕಳ ವ್ಯಥೆಯ ಕಥೆ. ಈ ರಾಜ್ಯದ ಯುವಕರು ಮದುವೆಯಾಗಬೇಕೆಂದರೆ, ವಧುವನ್ನು ಹುಡುಕಿಕೊಂಡು 2 ಸಾವಿರ ಮೈಲುಗಳಷ್ಟು ದೂರ ಪ್ರಯಾಣಿಸಬೇಕು. ಅಷ್ಟೇ  ಅಲ್ಲ, ತಮ್ಮೂರಿನ ಭಾಷೆ, ಸಂಸ್ಕೃತಿ ಏನೂ ಗೊತ್ತಿರದ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಳ್ಳಬೇಕು. ಏಕೆಂದರೆ, ಆ ಊರುಗಳಲ್ಲಿ ಹೆಣ್ಣುಮಕ್ಕಳೇ ಇಲ್ಲ! ಹೌದು. ಹೆಣ್ಣು ಭ್ರೂಣ ಹತ್ಯೆಯ ದೀರ್ಘಕಾಲಿಕ ಫಲಿತಾಂಶವಿದು. ಹೆಣ್ಣೆಂದರೆ ಹುಣ್ಣೆಂದು ಕಂಡವರು ಭ್ರೂಣ ಹತ್ಯೆಯ ಪಾಪ ಮಾಡಿದ್ದರಿಂದ ಈಗ ಹರ್ಯಾಣದಲ್ಲಿ ಲಿಂಗಾನುಪಾತದಲ್ಲಿ ಭಾರಿ ಅಂತರ ಏರ್ಪಟ್ಟಿದೆ.

ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಕಾರಣ ಅಲ್ಲಿನ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇದಕ್ಕಾಗಿ ಅವರು 2 ಸಾವಿರ ಮೈಲು ಪ್ರಯಾಣ ಬೆಳೆಸಿ, ಕೇರಳಕ್ಕೆ  ಬಂದು ಅಲ್ಲಿನ ಬಡ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ.ಸಾಧುರಾಂ ಬೆರ್ವಾಲ್ ಎಂಬ ಯುವಕ ಭಾಷೆಯೇ ಗೊತ್ತಿಲ್ಲದ ಕೇರಳದ ಅನಿತಾಳನ್ನು ವಿವಾಹವಾಗಿದ್ದಾನೆ. ಬಡತನದ  ಬೇಗೆಯಲ್ಲಿದ್ದ ಅನಿತಾ ಸಾಕಷ್ಟು ವರದಕ್ಷಿಣೆ ಕೊಡಲು ಸಾಧ್ಯವಿಲ್ಲವೆಂದು ಸಾಧುರಾಂ ನನ್ನ ವರಿಸಲು ಒಪ್ಪಿದ್ದಾಳೆ. ತನ್ನೂರಿನ ಇತರೆ ಬಡಹೆಣ್ಣುಮಕ್ಕಳಿಗೂ ಹರ್ಯಾಣದ ಯುವಕರ ಜೊತೆ  ಸಂಬಂಧ ಕುದುರಿಸುತ್ತಿದ್ದಾಳೆ. ಹುಡುಗನ ಮನೆಯವರೇ ಖರ್ಚು ನೋಡುವ ಕಾರಣ ಕೇರಳಿಗರು ಕಣ್ಣುಮುಚ್ಚಿ ಮದುವೆ ಮಾಡಿಸುತ್ತಿದ್ದಾರೆಂದು ಖಾಸಗಿ ಸುದ್ಧಿ ಮಾಧ್ಯಮ ವರದಿ ಮಾಡಿದೆ.

SCROLL FOR NEXT