ನವದೆಹಲಿ: ಪಟೇಲ್ ಸಮುದಾಯಕ್ಕೆ ಮೀಸಲು ಆಗ್ರಹಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ರ‍್ಯಾಲಿಯನ್ನು ಹಾರ್ದಿಕ್ ಪಟೇಲ್ ಎರಡನೇ ಬಾರಿ ಕೈಬಿಟ್ಟಿದ್ದಾರೆ. 'ಸಚಿವ ಸೌರಭ್ ಪಟೇಲ್ ಹಾರ್ದಿಕ್ ಪಟೇಲ್ ಅವರನ್ನು ಸೋಮವಾರ ಮಾತುಕತೆಗೆ ಆಹ್ವಾನಿಸಿದ್ದಾರೆ. ಸಂಜೆ 7.30ರೊಳಗೆ ವಿಷಯ ಇತ್ಯರ್ಥಗೊಳ್ಳದಿದ್ದರೆ, ಮಂಗಳವಾರ ರ‍್ಯಾಲಿ ನಡೆಸಲಾಗುವುದು,' ಎಂದು ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಾವು ನಮ್ಮ ಪಟ್ಟನ್ನು ಸಡಿಲಿಸಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರ‍್ಯಾಲಿ ನಡೆಸಲು ಸರಕಾರ ಎರಡನೇ ಬಾರಿಯೂ ಅನುಮತಿ ನಿರಾಕರಿಸಿದ ನಂತರವೂ ರ‍್ಯಾಲಿ ನಡೆಸಿಯೇ ಸಿದ್ಧ ಎಂದು ಹಾರ್ದಿಕ್ ಪಟೇಲ್ ಹೇಳಿದ್ದರು.
ಪಟೇಲ್ ಸಮುದಾಯದ ದಂಡಿ ಯಾತ್ರೆಗೆ ಸರಕಾರ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಹಿಂದಿನ ಭಾನುವಾರವೂ ರ‍್ಯಾಲಿ ರದ್ದು ಪಡಿಸಿದ್ದರು.