ನವದೆಹಲಿ:ಕಲುಶಿತಗೊಂಡಿರುವ ಯಮುನಾ ನದಿಯನ್ನು ಮೂರು ವರ್ಷಗಳಲ್ಲಿ ಸ್ವಚ್ಛಗೊಳಿಸುವುದಾಗಿ ದೆಹಲಿ ಜಲಸಂಪನ್ಮೂಲ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ.
ಯಮುನಾ ನದಿ ಬಳಿ ತಪಾಸಣೆ ನಡೆಸಿದ ಸಚಿವರು, ಇನ್ನು ಮೂರು ವರ್ಷಗಳಲ್ಲಿ ನದಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ನದಿಯಲ್ಲಿ ಆಮ್ಲಜನಕದ ಕೊರತೆ ಇದೆ. ಈ ಹಿಂದಿನ ಸರ್ಕಾರಗಳಿಗೆ ನದಿಯನ್ನು ಸ್ವಚ್ಛಗೊಳಿಸಲು ಇಚ್ಛಾಶಕ್ತಿ ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ.
"ತಪಾಸಣೆ ವೇಳೆ ನದಿಯಲ್ಲಿ ಘನತ್ಯಾಜ್ಯ ಇರುವುದನ್ನು ಗಮನಿಸಿದೆ. ಇದೇ ಮೊದಲ ಬಾರಿಗೆ ಸರ್ಕಾರಕ್ಕೆ ಸಂಬಂಧಿಸಿದವರಿಂದ ಯಮುನಾ ನದಿಯ ತಪಾಸಣೆ ನಡೆದಿದೆ. ಆರು ತಿಂಗಳಲ್ಲಿ ಬದಲಾವಣೆ ಗೋಚರಿಸಲಿದೆ ಎಂದು ಕಪಿಲ್ ಮಿಶ್ರಾ ತಿಳಿಸಿದ್ದಾರೆ. ಸಚಿವರೊಂದಿಗೆ ದೆಹಲಿ ಜಲಮಂಡಳಿ ಅಧಿಕಾರಿಗಳೂ ತಪಾಸಣೆಯಲ್ಲಿ ಭಾಗವಹಿಸಿದ್ದರು.