ಸಾಂದರ್ಭಿಕ ಚಿತ್ರ 
ದೇಶ

ವೈದ್ಯಕೀಯ ತುರ್ತು; ದೆಹಲಿಗೆ ಹಿಂದಿರುಗಿದ ನ್ಯೂಯಾರ್ಕ್ ಮಾರ್ಗದ ಏರ್ ಇಂಡಿಯ ವಿಮಾನ

ನ್ಯೂಯಾರ್ಕ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಹಾರಾಟದ ಎರಡು ವರೆ ಘಂಟೆಯ ನಂತರ ವೈದ್ಯಕೀಯ ತುರ್ತಿನಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ

ನವದೆಹಲಿ: ನ್ಯೂಯಾರ್ಕ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಹಾರಾಟದ ಎರಡು ವರೆ ಘಂಟೆಯ ನಂತರ ವೈದ್ಯಕೀಯ ತುರ್ತಿನಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿಳಿದಿದೆ.

ಇಂದು ಮಧ್ಯಾಹ್ನ ೧:೫೬ಕ್ಕೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಐ-೧೦೧ ವಿಮಾನ ಹೊರಟಿತ್ತು. ಆದರೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಉಸಿರಾಟದ ತೊಂದರೆ ಎಂದು ದೂರಿದ್ದರಿಂದ ವಿಮಾನ, ನಿಲ್ದಾಣದಲ್ಲಿ ಸುಮಾರು ೫:೦೦ ಘಂಟೆಗೆ ಭೂಸ್ಪರ್ಶ ಮಾಡಿತು ಎಂದು ವಿಮಾನದ ಕಮ್ಯಾಂಡರ್ ತಿಳಿಸಿದ್ದಾರೆ.

"೩೨೭ ಪ್ರಯಾಣಿಕರನ್ನು ಹೊತ್ತ ಬೊಯಿಂಗ್ ಬಿ೭೭೭ ತಡೆರಹಿತ ವಿಮಾನ ನ್ಯೂಯಾರ್ಕ್ ಗೆ ಹೊರಟಿತ್ತು. ಆದರೆ ವಿಮಾನದಲ್ಲಿ ಪ್ರಾಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಉಸಿರಾಟದ ತೊಂದರೆ ಎಂದು ದೂರಿದ್ದರಿಂದ ಹಾಗೂ ಅವರಿಗೆ ತುರ್ತು ವೈದ್ಯಕೀಯ ಚಿತ್ಸೆಯ ಅಗತ್ಯವಿದ್ದರಿಂದ ಸೂಕ್ಷತೆಯನ್ನು ತೋರಿದ ಕಮ್ಯಾಂಡರ್ ಜೊಯಾ ಅಗರವಾಲ್ ದೆಹಲಿಗೆ ಹಿಂದಿರುಗಲು ನಿರ್ಧರಿಸಿದರು" ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿ ವಿಮಾನನಿಲ್ದಾಣದಲ್ಲಿ ೫ ಘಂಟೆಗೆ ವಿಮಾನ ಇಳಿದಾಕ್ಷಣ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel