ನವದೆಹಲಿ: ದೇಶಾದ್ಯಂತ ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ಕಾಲ್ ಡ್ರಾಪ್ ಸಮಸ್ಯೆ ಶೀಘ್ರದಲ್ಲಿ ಅಂತ್ಯವಾಗುವ ಭರವಸೆ ದೊರೆತಿದೆ. ಇನ್ನು ಒಂದು ತಿಂಗಳಲ್ಲಿ ಈ ತೊಂದರೆಗೆ ಪರಿಹಾರ ನೀಡಲಿರುವುದಾಗಿ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅಭಯ ನೀಡಿದ್ದಾರೆ. ಟವರ್ ರೇಡಿಯೇಷನ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದಾಗಿನೆಟ್‍ವರ್ಕ್‍ಗಳ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸಚಿವರು ಟ್ರಾಯ್ ನಡೆಸಿರುವ ಆಡಿಟ್ ಬಗ್ಗೆ ವಿವರಿಸಿದ್ದಾರೆ. ``ನಾನು ಆಡಿಟ್ ನಡೆಸಲು ಟ್ರಾಯ್ ಗೆ ಆದೇಶಿಸಿದ್ದಾರೆ. ಆ ಪ್ರಕಾರವಾಗಿ ಆಡಿಟ್ ನಡೆದಿದೆ. ವರದಿ ನೋಡಿ ಕೂಡಲೆ ಕ್ರಮ ಕೈಗೊಂಡು ಇನ್ನೊಂದು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಲಿದ್ದೇವೆ ಎಂದು ಪ್ರಸಾದ್ ಭರವಸೆ ನೀಡಿದ್ದಾರೆ. ಅದರೆ ಮೊಬೈಲ್ ಟವರ್ ವಿರುದ್ಧ ಚಳವಳಿ ಮತ್ತು ಕಾಲ್ ಡ್ರಾಪ್ ಸಮಸ್ಯೆ ಏಕಕಾಲಕ್ಕೆ ಪರಿಹರಿಸಲು ಸಾಧ್ಯವಿಲ್ಲ'' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಹೆಚ್‍ಒ) ವರದಿ ತರಿಸಿಕೊಂಡಿರುವ ಸಚಿವ ರವಿಶಂಕರ್ ಪ್ರಸಾದ್, ಮೊಬೈಲ್ ಟವರ್‍ನ ವಿಕಿರಣಗಳು ಅಪಾಯಕಾರಿಯೇನಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಪ್ರತಿಭಟನೆ ಕೈಬಿಡಬೇಕೆಂದು ಕೇಳಿದ್ದಾರೆ.