ದೇಶ

ನೇತಾಜಿ ಸಮಗ್ರ ಅಧ್ಯಯನದ ನಂತರವಷ್ಟೇ ಮುಂದಿನ ಕ್ರಮ: ವೆಂಕಯ್ಯ ನಾಯ್ಡು

Shilpa D

ಹೈದರಾಬಾದ್: ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಸೇರಿದ ದಾಖಲೆಗಳು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಭಾರತವು ಇತರೆ ದೇಶಗಳೊಂದಿಗೆ ಹೊಂದಿರುವ ಸಂಬಂಧದ ಮೇಲೆ  ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಅಧ್ಯಯನ ನಡೆಸುತ್ತಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

70 ವರ್ಷಗಳಿಂದ ಭಾರತೀಯರಿಗೆ ನಿಗೂಢವಾಗಿ ಉಳಿದ ಮತ್ತು ತೀವ್ರ  ಚರ್ಚೆಗೆ ಕಾರಣವಾದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಕಣ್ಮರೆಗೆ ಸಂಬಂಧಿಸಿದ 64 ಅತಿ ಮಹತ್ವದ ರಹಸ್ಯ ಕಡತಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದಾಖಲೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಸಾರ್ವಜನಿಕವಾಗಿ  ಬಹಿರಂಗಗೊಳಿಸಿರುವುದು ಒಳ್ಳೆಯ ನಿರ್ಧಾರ. ಆದರೆ, ಈ ಕಡತಳಲ್ಲಿ ಏನಿದೆ ಮತ್ತು ಇದು ಹೇಗೆ ಭಾರತದ ನೆರೆಹೊರೆಯ ದೇಶಗಳೊಂದಿಗೆ ಹೊಂದಿರುವ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಮಗ್ರವಾಗಿ ಅಧ್ಯಯನ ನಡೆಸಬೇಕಿದೆ. ಆ ನಂತರವಷ್ಟೇ ಕೇಂದ್ರ ಸರ್ಕಾರ ಈ ವಿಚಾರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.

SCROLL FOR NEXT