ಫಯಾಜ್ ಅಹ್ಮದ್ ಭಟ್ 
ದೇಶ

ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಮೃತದೇಹ ಪತ್ತೆ

ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಉಗ್ರ ಫಯಾಜ್ ಅಹ್ಮದ್ ನ ದೇಹ ಗುಂಡುಗಳಿಂದ ಸಂಪೂರ್ಣ ಛಿದ್ರವಾಗಿದ್ದು...

ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಉಗ್ರ ಫಯಾಜ್ ಅಹ್ಮದ್ ನ ದೇಹ ಗುಂಡುಗಳಿಂದ ಸಂಪೂರ್ಣ ಛಿದ್ರವಾಗಿದ್ದು, ಕಾಶ್ಮೀರದ ತಂಗ್ ಮಾರ್ಗ್ ನಲ್ಲಿ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ.

ವೈಲೂ(ಪಟ್ವಾನ್) ನಿವಾಸಿಯಾಗಿರುವ ಉಗ್ರ ಫಯಾಜ್ ಅಹ್ಮದ್ ಮೇಲೆ ಯಾರೋ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ರಭಸಕ್ಕೆ ಫಯಾಜ್ ದೇಹ ಸಂಪೂರ್ಣ ಛಿದ್ರಗೊಂಡಿದೆ. ತಂಗ್ ಮಾರ್ಗ್ ಪಟ್ಟಣದ ದೇವಬಗ್ ಗ್ರಾಮದಲ್ಲಿ ಶನಿವಾರ ಪತ್ತೆಯಾಗಿದ್ದು, ಶವವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಉಗ್ರ ಫಯಾಜ್ ಹಿಜ್ಬುಲ್ ಮುಜಾಹಿದ್ದಿನ್ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯನಾಗಿದ್ದು ಕಮಾಂಡರ್ ಹುದ್ದೆಯಲ್ಲಿದ್ದ. ದೇಹವನ್ನು ಸೂಕ್ತ ಪೊಲೀಸ್ ತಪಾಸಣೆ ನಂತರ ಅಂತಿಮ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲು ಆತನ ಕುಟುಂಬದ ವಶಕ್ಕೆ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರದ ಹಿಂದೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೇಬು ಹಣ್ಣಿನ ತೋಟದಲ್ಲಿ ಮೂವರು ಯುವಕರ ಶವಗಳು ಅದೇ ರೀತಿ ಪತ್ತೆಯಾಗಿದ್ದು, ಇದು ನಾಲ್ಕನೇ ಪ್ರಕರಣವಾಗಿದೆ.

ಉಗ್ರರ ನಡುವಿನ ಬಿಕ್ಕಟ್ಟಿನ ಕಾರಣಕ್ಕೆ ಈ ಮೂವರ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದಿನ್ ಹಾಗೂ ಅದರಿಂದ ಒಡೆದು ಪ್ರತ್ಯೇಕವಾಗಿರುವ ಲಷ್ಕರ್ ಇ ಇಸ್ಲಾಂ ಸಂಘಟನೆಗಳ ನಡುವಿನ ಪೈಪೋಟಿಯ ಪರಿಣಾಮ ಇದು ಎಂದು ಹೇಳಲಾಗಿದೆ. ಆದರೆ ಲಷ್ಕರ್ ಇ ಇಸ್ಲಾಂ ಎಂಬ ಸಂಘಟನೆಯೇ ಇಲ್ಲ ಎಂದು ಹಿಜ್ಬುಲ್ ಕಮಾಂಡರ್ ಸೈಯದ್ ಸಲಾಹುದ್ದೀನ್ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ