ನೇತಾಜಿ ಸುಭಾಷ್ ಚಂದ್ರ ಬೋಸ್ 
ದೇಶ

ಉತ್ತರ ಪ್ರದೇಶದಲ್ಲಿ ಬಾಬಾ ಆಗಿದ್ದ ಬೋಸ್..?

ನೇತಾಜಿ ಭಾರತದಲ್ಲೇ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದರೆ? ಹೌದೆನ್ನುತ್ತಾರೆ ಅವರ ಕೆಲ ಆತ್ಮೀಯರು. ಆದರೆ ಇದು ನೇತಾಜಿ ಅವರಿಗೆ ಆತ್ಮೀಯರಾಗಿದ್ದ ಕೆಲವೇ ಕೆಲವರಿಗೆ...

ನೇತಾಜಿ ಭಾರತದಲ್ಲೇ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದರೆ? ಹೌದೆನ್ನುತ್ತಾರೆ ಅವರ ಕೆಲ ಆತ್ಮೀಯರು. ಆದರೆ ಇದು ನೇತಾಜಿ ಅವರಿಗೆ ಆತ್ಮೀಯರಾಗಿದ್ದ ಕೆಲವೇ ಕೆಲವರಿಗೆ ಗೊತ್ತಿದ್ದ ಸತ್ಯ.  ನೇತಾಜಿಗೆ ಆತ್ಮೀಯರಾಗಿದ್ದ ಸುನಿಲ್ ಗುಪ್ತಾ ಎನ್ನುವವರು ಉತ್ತರಪ್ರದೇಶದ ಫೈಜಾಬಾದ್‍ನ ಭಗ್ ವಾನ್ ಜಿ ಎನ್ನುವ ಸಾಧುವೊಬ್ಬರನ್ನು ಭೇಟಿಯಾಗಲು ನಿರಂತರವಾಗಿ ಹೋಗಿ  ಬರುತ್ತಿದ್ದರಂತೆ.

ನಂತರ ಸುನಿಲ್ ಗುಪ್ತಾ ಶಿಷ್ಯ ದಾಸ್‍ಗುಪ್ತಾ ಈ ವಿಚಾರವನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹೇಳಿಕೊಂಡಿದ್ದಾರೆ. ನೇತಾಜಿಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಚೆನ್ ನಾಗಿ ಅರಿವಿತ್ತು.   ರಷ್ಯಾದ ವಿಭಜನೆ, ಬಾಂಗ್ಲಾ ವಿಮೋಚನೆ ಕುರಿತು ಭವಿಷ್ಯ ನುಡಿದಿದ್ದರು ಎನ್ನುತ್ತಾರೆ ಗುಪ್ತಾ. ಪತ್ರಕರ್ತ ವಿ.ಎನ್. ಅರೋರಾ ಕೂಡ ಬಾಬಾ ಕುರಿತು ಸಾಕಷ್ಟು ಸಂಶೋಧನೆ ಮಾಡಿದವರು.  ಅವರೂ ಬಾಬಾ ಬೇರಾರೂ ಅಲ್ಲ ನೇತಾಜಿ ಎಂದು ಪ್ರತಿಪಾದಿಸುತ್ತಾರೆ. ಬಾಬಾ ಸಾವಿನ ನಂತರ ಜಿಲ್ಲಾಧಿಕಾರಿ ಅನುಮತಿ ಪಡೆದು ಅವರ ಮನೆಯ ಪರಿಶೀಲನೆ ನಡೆಸಿದ್ದರಂತೆ. ಅಲ್ಲಿ ಅವರಿಗೆ   ನೇತಾಜಿಗೆ ಸಂಬಂಧಿಸಿದ ಹಲವು ಕೃತಿಗಳು, ನೇತಾಜಿ ಬೆಂಬಲಿಗರ ಹೇಳಿಕೆಗಳ ಪತ್ರಿಕೆಯ ಕ್ಲಿಪ್ಪಿಂಗ್ ಪತ್ತೆಯಾಗಿದ್ದವಂತೆ.

ಬಾಬಾ ಸಹವರ್ತಿ, ಅಯೋಧ್ಯೆಯ ತೀರ್ಥ ಪುರೋಹಿತರಾಗಿದ್ದ ರಾಮ್ ಕಿಶೋರ್ ಒಂದು ದಿನ ರಾತ್ರಿ ಹೊರಗೆ ಬೆಂಕಿ ಹಾಕಿಕೊಂಡು ಮಲಗಿದ್ದರಂತೆ. ಆಗ ಅವರಿಗೆ ತಕ್ಷ ಣ ಕೋಣೆಂಯೊಳಗಿದ್ದ   ಬಾಬಾ ಸ್ಥಿತಿ ನೆನಪಾಗಿ ನಿಮಗೇನಾದರೂ ಬೆಂಕಿಯ ಅವಶ್ಯಕತೆ ಇದೆಯೇ ಎಂದು ಕೇಳಿದರಂತೆ. ಆಗ ಬಾಬಾ ``ಈ ದೇಹ ಸೈಬೀರಿಯಾದಲ್ಲಿ ಬದುಕಿದೆ. ನನಗೆ ಚಳಿ ಕಾಯಿಸುವ ಅಗತ್ಯವಿಲ್ಲ''   ಎಂದು ಉತ್ತರಿಸಿದ್ದರು ಎನ್ನುವುದನ್ನು ಅರೋರಾ ಉಲ್ಲೇಖಿಸುತ್ತಾರೆ.

ಸಿಐಎ ವರದಿ ಹೇಳುವುದೇನು?
ನೇತಾಜಿ ವಿಮಾನ ದುರಂತದಲ್ಲಿ ಮೃತಪಟ್ಟವರು ಎನ್ನುವ ವಾದವನ್ನು ಸಿಐಎ ಕೂಡ ಒಪ್ಪಿಕೊಂಡಿಲ್ಲ. ಜವಾಹರಲಾಲ್ ನೆಹರೂ ಸರ್ಕಾರದ ವಿರುದ್ಧ ಬಂಡುಕೋರರ ಗುಂಪೊಂದನ್ನು  ನೇತಾಜಿ  ಕಟ್ಟುತ್ತಿರಬಹುದು ಎಂದು ಸಿಐಎಗೆ ಸೇರಿದ 1964ರ ವರದಿಯೊಂದು ಮಾಹಿತಿ ನೀಡುತ್ತದೆ. ನೇತಾಜಿ ಸೈಬೀರಿಯಾದಲ್ಲಿದ್ದಾರೆ. ಭಾರತಕ್ಕೆ ದೊಡ್ಡ ಮಟ್ಟದಲ್ಲಿ ವಾಪಸಾಗುವ ಅವಕಾಶಕ್ಕಾಗಿ  ಅವರು ಎದುರು ನೋಡುತ್ತಿದ್ದಾರೆ ಎಂಬ ಮಾಹಿತಿಯನ್ ನೂ ಮೂಲಗಳನ್ನು ಆಧರಿಸಿ ಸಿಐಎ ವರದಿಯಲ್ಲಿ ಹೇಳಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT