ಯಮುನಾ ನದಿಗೆ ತ್ಯಾಜ್ಯವೆಸೆದರೆ ರು. 5,000 ದಂಡ
ಯಮುನಾ ನದಿ ಮಾಲಿನ್ಯಮುಕ್ತವಾಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ನದಿಯನವ್ನು ಕಲುಷಿತಗೊಳಿಸುವವರಿಗೆ ರು. 5000 ದಂಡ...
ನವದೆಹಲಿ: ಯಮುನಾ ನದಿ ಮಾಲಿನ್ಯಮುಕ್ತವಾಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ನದಿಯನವ್ನು ಕಲುಷಿತಗೊಳಿಸುವವರಿಗೆ ರು. 5000 ದಂಡ ವಿಧಿಸಲು ತೀರ್ಮಾನ ಕೈಗೊಂಡಿದೆ.
ಹಬ್ಬದ ಸಂದರ್ಭಗಳಲ್ಲಿ ಯಮುನಾ ನದಿ ಹೆಚ್ಚಾಗಿ ಕಲುಷಿತವಾಗುತ್ತದೆ. ಪೂಜಾ ವಿಧಿ ವಿಧಾನಗಳ ನಂತರ ನದಿಯಲ್ಲಿ ಯಾವುದೇ ತ್ಯಾಜ್ಯ ವಸ್ತುಗಳನ್ನು ಬಿಸಾಡುವಂತಿಲ್ಲ. ಹಾಗೇನಾದರು ಮಾಡಿದರೆ ಆ ವ್ಯಕ್ತಿಗಳ ಕೈಯಿಂದ ರು. 5000 ದಂಡ ವಸೂಲು ಮಾಡಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಇರುವ ನಿರ್ದೇಶನಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಜನವರಿಯಲ್ಲಿ ಜಾರಿ ಮಾಡಿತ್ತು.
ದೆಹಲಿಯ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಅಸೀಂ ಅಹ್ಮದ್ ಖಾನ್ ನೇತೃತ್ವದಲ್ಲಿ ಸೇರಿದ ಸಭೆಯಲ್ಲಿ ಸಚಿವ ಸಂಪುಟ ಈ ತೀರ್ಮಾನ ತೆಗೆದುಕೊಂಡಿದೆ. ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ಅದನ್ನೆಲ್ಲಾ ನದಿಗೆ ಎಸೆಯುವ ಯಾವುದೇ ವ್ಯಕ್ತಿಗಳನ್ನು ಕಂಡರೆ ಆ ವಿಚಾರವನ್ನು ಪೊಲೀಸರಿಗೆ,ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಅಧಿಕಾರಿಗಳಿಗೆ ಮತ್ತು ಮುನ್ಸಿಪಾಲಿಟಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇವರಿಗೆ ದಂಡ ವಸೂಲಿ ಮಾಡುವ ಅಧಿಕಾರವಿದೆ. ಅದೇ ವೇಳೆ ತ್ಯಾಜ್ಯಗಳನ್ನು ಎಸೆಯುವುದನ್ನು ನಿಯಂತ್ರಿಸಲು ಬ್ಯಾರಿಕೇಡ್ಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.