ಗೋರಖ್‍ಪುರ: ಹಿಂದು ಧರ್ಮಕ್ಕೆ ಹಿಂತಿರುಗಲು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‍ಗೆ ಸಕಾಲ ಎಂದಿದ್ದಾರೆ ಗೋರಖ್‍ಪುರ ಸಂಸದ ಯೋಗಿ ಆದಿತ್ಯನಾಥ್.
ಮುಹಮ್ಮದ್: ಮೆಸೇಂಜರ್ ಆಫ್ ಗಾಡ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದರ ವಿರುದ್ಧ ಹೊರಡಿಸಲಾಗಿದ್ದ ಫತ್ವಾಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಆದಿತ್ಯನಾಥ್ ಸ್ವಾಗತಿಸಿದ್ದಾರೆ.
'ರೆಹಮಾನ್‍ಗೆ ಫತ್ವಾ ನೀಡಿರುವುದೊಂದು ಹಾಸ್ಯಾಸ್ಪದ ಎಂದೂ ಬಿಜೆಪಿ ನಾಯಕ ಲೇವಡಿ ಮಾಡಿದ್ದಾರೆ. ಗೋರಖ್‍ಪುರ ಸಂಸದ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಮುಖರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೇಳಿಕೆ ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಶೈನಾ ಎನ್.ಸಿ. ವ್ಯಕ್ತಿಗತ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಲಾಗದು ಎಂದಿದ್ದಾರೆ.