ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಮೂರು ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನವನ್ನು ಮುಂಬೈ ಕೋರ್ಟ್ ಅ.5 ವರೆಗೆ ವಿಸ್ತರಿಸಿದೆ.
ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ, ಶಾಮ್ ರೈ ಅವರ 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಸೆ.21 ಕ್ಕೆ ಮುಕ್ತಾಯಗೊಂಡಿತ್ತು. ಗಣೇಶೋತ್ಸವ ಆಚರಣೆಯಲ್ಲಿರುವುದರಿಂದ ಪೊಲೀಸರು ಆರೋಪಿಗಳಿಗೆ ಭದ್ರತೆ ನೀಡಲಾಗದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಮುಂಬೈ ನ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿಯಿಂದಲೇ ಏಪ್ರಿಲ್ 24 ರಂದು ಹತ್ಯೆಗೀಡಾಗಿದ್ದಳು. ಈ ಪ್ರಕರಣದಲ್ಲಿ ಸಂಜೀವ್ ಖನ್ನಾ, ಶಾಮ್ ರೈ ಕೂಡಾ ಶಾಮೀಲಾಗಿದ್ದಾರೆ.