ದೇಶ

ಅಮೆರಿಕದಿಂದ ಎರಡೂವರೆ ಶತಕೋಟಿ ಡಾಲರ್ ಮೊತ್ತದ ಹೆಲಿಕಾಪ್ಟರ್ ಖರೀದಿಸಿದ ಭಾರತ

Sumana Upadhyaya

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಗೂ ಮುನ್ನ ಭಾರತ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಕಂಪೆನಿಯಾದ ಅಮೆರಿಕದ ಬೋಯಿಂಗ್ ನಿಂದ 22 ಅಪಾಚೆ ಎಎಚ್-64ಡಿ ದಾಳಿಯ ಹೆಲಿಕಾಪ್ಟರ್ ಗಳು ಮತ್ತು 15 ಚಿನೂಕ್ ಸಿಎಚ್ 47ಬಿ ಭಾರೀ ತೂಕದ ಹೆಲಿಕಾಪ್ಟರ್ ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ಭದ್ರತಾ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ಖಜಾನೆಗೆ 15 ಸಾವಿರ ಕೋಟಿ ರೂಪಾಯಿ ಹೊರೆ ಬೀಳುವ ಈ ಎರಡು ಒಪ್ಪಂದಗಳಿಗೆ ನಿನ್ನೆ ದೆಹಲಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು  ಅಮೇರಿಕಾದ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.
ರಕ್ಷಣಾ ಖರೀದಿ ಮಂಡಳಿ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದ ನಂತರ ಬಹು ಬಿಲಿಯನ್ ಡಾಲರ್ ಒಪ್ಪಂದಗಳನ್ನು ಕಳೆದ ವರ್ಷ  ಒಪ್ಪಿಗೆ ಮಾಡಲಾಗಿತ್ತು. ಇದರಿಂದ ಭಾರತ-ಅಮೆರಿಕಾ ನಡುವಣ ರಕ್ಷಣಾ ಸಹಕಾರವನ್ನು ವೃದ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಎಎಚ್ -64 ಅಪಚೆ: ಇದು ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯ ಯುದ್ಧ ವಿಮಾನವಾಗಿದೆ. ಕಾರ್ಯದಕ್ಷತೆಯಲ್ಲಿ ಮುಂದಿದೆ. ಉದ್ದದ ಶ್ರೇಣಿಯ ಶಸ್ತ್ರಾಸ್ತ್ರಗಳ ನಿಖರತೆ, ಎಲ್ಲಾ ಹವಾಮಾನಗಳಲ್ಲಿ ಹೋರಾಟ ನಡೆಸುವ ಶಕ್ತಿ  ಮತ್ತು ವಸ್ತುಗಳ ಪತ್ತೆಯಲ್ಲಿ ಮುಂದಿದೆ. ಸಂಯೋಜಿತ ಸಂವೇದಕಗಳು, ಜಾಲ, ಮತ್ತು ಸಾಂದರ್ಭಿಕ ಜಾಗೃತಿ ಡಿಜಿಟಲ್ ಸಂವಹನ, ನೈಜ ಸಮಯದಲ್ಲಿ ಯುದ್ಧ ರಂಗದಲ್ಲಿ ನಿರ್ವಹಣೆ, ಮತ್ತು ಜಂಟಿ ಕಾರ್ಯಾಚರಣೆ 'ಯುದ್ಧಭೂಮಿಯಲ್ಲಿ ಕಮಾಂಡರ್ಗಳಿಗೆ ಚಿತ್ರಗಳನ್ನು ಮತ್ತು ಗುರಿ ಸ್ಥಾನಗಳ ಡಿಜಿಟಲ್ ಸಂವಹನ ಮೊದಲಾದ ಸೌಲಭ್ಯಗಳು ಇದರಲ್ಲಿವೆ.

ಸಿಎಚ್-47 ಎಫ್ ಚಿನೂಕ್: ಅಮೆರಿಕಾದ ಅವಳಿ ಎಂಜಿನ್ ಇದಾಗಿದ್ದು, ಯಂತ್ರದಲ್ಲಿ ರೋಟರ್ ಭಾರ ಎತ್ತುವ ಹೆಲಿಕಾಪ್ಟರ್, ಪೂರ್ಣವಾಗಿ ಸಂಯೋಜಿಸಿದ ಡಿಜಿಟಲ್ ಕಾಕ್ಪಿಟ್ ನಿರ್ವಹಣಾ ವ್ಯವಸ್ಥೆ ಮತ್ತು ಮುಂದುವರಿದ ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಯುದ್ಧಭೂಮಿಯಲ್ಲಿ ಪಡೆಗಳು ಫಿರಂಗಿ, ಸ್ಫೋಟಕಗಳು, ಇಂಧನ, ನೀರು, ತಡೆಗೋಡೆ ವಸ್ತುಗಳು, ಪೂರೈಕೆಗಳನ್ನು ಮತ್ತು ಉಪಕರಣವನ್ನು ಇದರ ಪ್ರಾಥಮಿಕ ಮಿಷನ್ ಹೊಂದಿರುತ್ತದೆ. ಚಿನೂಕ್ 1962ರಿಂದ ಚಿನೂಕ್ ಅಮೆರಿಕ ಸೇನೆಯಲ್ಲಿದ್ದು, ಇದರ ಎ,ಬಿ ಮತ್ತು ಸಿಯನ್ನು ಚೀನಾದ ವಿಯೆಟ್ನಾಂನಲ್ಲಿ ನಿಯೋಜಿಸಲಾಗಿದೆ. ಗಲ್ಫ್ ಯುದ್ಧದ ಸಂದರ್ಭದಲ್ಲಿ ಅಮೆರಿಕ ಸೇನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿತ್ತು.

ಭಾರತದ ರಕ್ಷಣಾ ಮಾರುಕಟ್ಟೆಯಲ್ಲಿ ತನ್ನ ಇರುವಿಕೆಯನ್ನು ತೋರಿಸಲು ಅಮೆರಿಕ ಈ ಒಪ್ಪಂದಕ್ಕೆ ಒಲವು ತೋರಿಸಿತ್ತು. ಅಮೆರಿಕಕ್ಕೆ ಭಾರತೀಯ ರಕ್ಷಣಾ ವಲಯದಿಂದ ಕಳೆದ ದಶಕದಿಂದ 10 ಶತಕೋಟಿ ಡಾಲರ್ ಹಣ ಹರಿದು ಬಂದಿದೆ.

ಸಾಗರ ಮಾತುಕತೆ: ಇದೇ ಸಂದರ್ಭದಲ್ಲಿ ಎರಡೂ ದೇಶಗಳು ಸಾಗರ ಮಾತುಕತೆಯನ್ನು ಆರಂಭಿಸಲು ನಿರ್ಧರಿಸಿವೆ. ಸಾಗರಗಳನ್ನು ಮತ್ತು ಅವುಗಳಿಂದ ಸಿಗುವ ಉತ್ಪನ್ನಗಳನ್ನು ಬಳಸಿಕೊಂಡು ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಿವೆ.

SCROLL FOR NEXT