ದೇಶ

ಕಪ್ಪು ಹಣ ಕಾಲಾವಕಾಶ ಇಲ್ಲ

Vishwanath S

ನವದೆಹಲಿ: ವಿದೇಶಗಳಲ್ಲಿನ ಆಸ್ತಿ ಬಹಿರಂಗಪಡಿಸಲು ನಿಗದಿಪಡಿಸಿರುವ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಹೇಳಿದೆ.

ಗಡುವು ಮುಗಿದ ನಂತರ ವಿದೇಶಗಳಲ್ಲಿ ಆಸ್ತಿ ಇರುವುದು ಪತ್ತೆಯಾದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಜಂಟಿ ಕಾರ್ಯದರ್ಶಿ ವಿ.ಆನಂದರಾಜನ್ ಹೇಳಿದ್ದಾರೆ.

ಆಸ್ತಿ ಬಹಿರಂಗಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಲ್ಲಿ ಎಂತಹ ಸ್ಪಂದನೆ ಸಿಕ್ಕಿತು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಅವಧಿ ಮುಗಿದ ನಂತರ ಯಾರಾದರೂ ಬಹಿರಂಗಪಡಿಸಲು ಮುಂದಾದರೆ ಯಾವುದೇ ರಿಯಾಯಿತಿ  ನೀಡುವುದಿಲ್ಲ ಎಂತಲೂ ಆನಂದರಾಜನ್ ಎಚ್ಚರಿಸಿದ್ದಾರೆ.

SCROLL FOR NEXT