ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ೪೦ ಕಡೆಗಳಲ್ಲಿ ಗುರುವಾರ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ದಾಳಿ ನಡೆಸಿದ ಪ್ರದೇಶಗಳಲ್ಲಿ ಭೋಪಾಲ್, ಇಂದೋರ್, ಉಜ್ಜೈನ್, ರೇವಾ, ಜಬಲ್ಪುರ, ಲಕನೌ ಮತ್ತು ಅಲ್ಲಹಾಬಾದ್ ಸೇರಿವೆ" ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.
ಸಿಬಿಐ ಇಲ್ಲಿಯವರೆಗೂ ೮೩ ಎಫ್ ಐ ಆರ್ ಗಳನ್ನು ದಾಖಲಿಸಿದ್ದು, ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ೧೨ ಪ್ರಾಥಮಿಕ ತನಿಖೆಗಳನ್ನು ಪ್ರಾರಂಭಿಸಿದೆ.
ಮಧ್ಯಪ್ರದೇಶದ ನರ್ಕಾರಿ ಕಾಲೇಜು ಮತ್ತು ನೌಕರಿಗಳ ನೇಮಕಾತಿಯಲ್ಲಿ ನಡೆದ ಭಾರಿ ಅವ್ಯವಹಾರ ಹಾಗೂ ಇದಕ್ಕೆ ಸಂಬಧಿಸಿದಂತೆ ೪೦ ಜನ ಮೃತಪಟ್ಟಿರುವುದನ್ನು ಸಿಬಿಐ ತನಿಖೆ ನಡೆಸಿದೆ.