ದೇಶ

ವರ್ಷ ಪೂರೈಸಿದ ಮಾಮ್

Vishwanath S
ಬೆಂಗಳೂರು: ಮಂಗಳ ಯಾನ ನೌಕೆ(ಮಾರ್ಸ್ ಆರ್ಬಿಟರ್ ಮಿಷನ್-ಮಾಮ್) ಗುರುವಾರ ಮಂಗಳನ ಕಕ್ಷೆಯಲ್ಲಿ ವರ್ಷ ಪೂರೈಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಹೆಗ್ಗಳಿಕೆಯಾಗಿರುವ ಮಂಗಳಯಾನ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿದಂತಾಗಿದೆ. 
ಮಂಗಳನ ಕಕ್ಷೆಯಲ್ಲಿರುವ ಮಾಮ್ ಸಾಧನೆಯ ಈ ಐತಿಹಾಸಿಕ ದಿನದ ಸ್ಮರಣಾರ್ಥ ಇಸ್ರೋ ಮಾರ್ಸ್ ಕಲರ್ ಕ್ಯಾಮೆರಾ(ಎಂಸಿಸಿ) ಕಳಿಸಿರುವ ಮಂಗಳನ ಚಿತ್ರ ಹಾಗೂ ವಿವಿಧ ಮಾಹಿತಿಗಳನ್ನು ಜೋಡಿಸಿ ಮಂಗಳನ ಭೂಪಟ ಬಿಡುಗಡೆ ಮಾಡಿದೆ. 
ಕಳೆದ ವರ್ಷದ ಇದೇ ದಿನ(ಸೆ.24) ತನ್ನ ಕಡಿಮೆ ವೆಚ್ಚದ ಮಂಗಳ ಯಾನ ನೌಕೆಯನ್ನು ಮಂಗಳನ ಕಕ್ಷೆಗೆ ಜೋಡಿಸುವ ಮೂಲಕ ಭಾರತ ಜಗತ್ತಿನ ಯಶಸ್ವಿ ಮಂಗಳಯಾನ ಸಾಧನೆಯ 4ನೇ ರಾಷ್ಟ್ರವಾಗಿ ಇತಿಹಾಸ ಬರೆದಿತ್ತು.
SCROLL FOR NEXT