ಬೆಂಗಳೂರು: ಗೋವಾದ ಬೈನಾ ಬೀಚ್‍ನಲ್ಲಿರುವ ಕನ್ನಡಿಗರ ಮನೆಗಳನ್ನು ಅಲ್ಲಿನ ಸರ್ಕಾರ ನೆಲಸಮಗೊಳಿಸಿ ಕರ್ನಾಟಕದ ವಿರುದ್ಧ ತನ್ನ ಆಕ್ರೋಶ ಹೊರಹಾಕಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಿಗರ ಮನೆ ನೆಲಸಮ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಜತೆ ಮಾತನಾಡುವುದಾಗಿ ತಿಳಿಸಿದ್ದಾರೆ.
``ಗೋವಾ ಸಿಎಂಗೆ ಪತ್ರ ಬರೆಯುವೆ ಮತ್ತು ಅಲ್ಲಿಗೆ ಸಚಿವರೊಬ್ಬರನ್ನು ಕಳಿಸಿ ಕನ್ನಡಿಗರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತದೆ'' ಎಂದು ಹೇಳಿದ್ದಾರೆ. ಗೋವಾದಲ್ಲಿ ಕನ್ನಡಗರಿಗೆ ಸಮಸ್ಯೆಯಾಗುವುದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕುಳಿತುಕೊಳ್ಳುವುದಿಲ್ಲ.
ಅಲ್ಲಿನ ಕನ್ನಡಿಗರಿಗೆ ಪದೇ ಪದೇ ಸಮಸ್ಯೆಯಾಗುತ್ತಲೇ ಇದೆ. ಇದಕ್ಕೊಂದು ಶಾಶ್ವತ ಪರಿಹಾರ ಹುಡುಕುವ ಬಗ್ಗೆಯೂ ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.