ಸಾಂದರ್ಭಿಕ ಚಿತ್ರ 
ದೇಶ

ಕಾವೇರಿ: ರಾಜ್ಯಕ್ಕೆ ಸಿಗುತ್ತಾ ರಿಲೀಫ್?

ನೀರು ಹರಿಸುವಂತೆ ತಮಿಳುನಾಡು ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆ ಸೋಮವಾರ...

ನವದೆಹಲಿ: ನೀರು ಹರಿಸುವಂತೆ ತಮಿಳುನಾಡು ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆ ಸೋಮವಾರ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಕರೆದಿದೆ.

ಸಕಾಲದಲ್ಲಿ ಮಳೆ ಬಾರದೆ ಕಾವೇರಿ ಕಣಿವೆಯ ಜಲಾಶಯಗಳು ಬರಿದಾಗಿರುವುದರಿಂದ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ನಿರ್ಣಾಯಕವಾಗಲಿದೆ. ಈಗಾಗಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿರುದ್ಧ ಮೈಸೂರು, ಮಂಡ್ಯ ಸುತ್ತಮುತ್ತಲ ಜನರು ಪ್ರತಿಭಟನೆ ನಡೆಸಿದ್ದಾರೆ.

ಒಂದು ವೇಳೆ ಸೋಮವಾರದ ಸಭೆಯಲ್ಲಿ ಮೇಲುಸ್ತುವಾರಿ ಸಮಿತಿ ಸಭೆ ಹೆಚ್ಚಿನ ನೀರು ಹರಿಸುವಂತೆ ಆದೇಶ ನೀಡಿದರೆ, ಕರ್ನಾಟಕ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಲಿದೆ. ಮೇಲುಸ್ತು ವಾರಿ ಸಮಿತಿ ಸೂಚನೆಯನ್ನು ಸರ್ಕಾರ ಪಾಲಿಸಲೇ ಬೇಕಾಗುತ್ತದೆ. ತಕ್ಷಣವೇ ಆದೇಶ ಪಾಲಿಸದೆ ಸಮಿತಿಯ ಸದಸ್ಯರು ಕಾವೇರಿ ಕಣಿವೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ನೀರು ಹರಿಸುವ ಸಂಬಂಧ ಆದೇಶ ನೀಡುವಂತೆ ರಾಜ್ಯ ಸಮಿತಿಗೆ ಮನವರಿಕೆ ಮಾಡಿಕೊಡಬಹುದು.

ಕಳೆದ ಸಾಲಿನಲ್ಲಿ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ತುಂಬಿ ತುಳು ಕುತ್ತಿದ್ದವು. ಈ ವರ್ಷ ಬರದಿಂದಾಗಿ ಜಲಾಶಯಗಳಲ್ಲಿ ಶೇ.50ರಷ್ಟು ನೀರು ಸಂಗ್ರಹವಿಲ್ಲ. ಹೀಗಾಗಿ ಮೇಲುಸ್ತುವಾರಿ ಸಮಿತಿ ಖುದ್ದು ಭೇಟಿ ನೀಡಿ ವಸ್ತುಸ್ಥಿತಿ  ಪರಿಶೀಲಿಸಿದರೆ, ರಾಜ್ಯದ ಸಂಕಷ್ಟ ಅರಿವಾಗಬಹುದು. ಈ ಮನವಿಯನ್ನು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಒಪ್ಪಬಹುದು, ಒಪ್ಪ ದಿರಲೂಬಹುದು. ಒಂದು ವೇಳೆ ಆದೇಶ ಪಾಲನೆ ಮಾಡಲೇಬೇಕೆಂದು ತಾಕೀತು ಮಾಡಿದರೆ, ಕರ್ನಾಟಕ ಸರ್ಕಾರ ಮೇಲುಸ್ತು ವಾರಿ ಸಮಿತಿ ಆದೇಶವನ್ನು ಸುಪ್ರೀಂ ಕೋರ್ಟ್ ಲ್ಲಿ ಪ್ರಶ್ನಿಸಬಹುದು.

ತಮಿಳುನಾಡು ತಾನು ಬೇಡಿಕೆ ಇಟ್ಟರಷ್ಟೇ ನೀರು ಹರಿಸಲು ಆದೇಶ ನೀಡುವಂತೆ ಮೇಲುಸ್ತುವಾರಿ ಸಮಿತಿಗೆ ಸದಾ ಒತ್ತಡ ಹಾಕುತ್ತದೆ. ಬೇಡಿಕೆ ಇಷ್ಟಷ್ಟು ನೀರು ಹರಿಸದೇ ಇದ್ದರೆ ಆ ರಾಜ್ಯವೇ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆ ಇದೆ. ಬರಗಾಲದಿಂದಾಗಿ ಕರ್ನಾಟಕ ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ಕಾವೇರಿ ನೀರು ಹರಿಸದ ಹಿನ್ನಲೆಯಲ್ಲಿ ಸಿಎಂ ಜಯಲಲಿತಾ ಪ್ರಧಾನಿಗೆ ಪತ್ರ ಬರೆದು ಮೇಲುಸ್ತುವಾರಿ ಸಮಿತಿ ಸಭೆಗೆ ಮನವಿ ಮಾಡಿದ್ದರು.

ಅಲ್ಲದೆ, ಈ ಅವಧಿಗೆ ಕರ್ನಾಟಕ 94 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, 66.443 ಟಿಎಂಸಿ ಹರಿಸಿದೆ. ಇನ್ನೂ 27.577 ಟಿಎಂಸಿ ಬಿಡುಗಡೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆಯೂ ಕೋರಿದ್ದರು. ತಮಿಳುನಾಡು ಮುಖ್ಯ ಕಾರ್ಯದರ್ಶಿ ರಾಜ್ಯದ ಮುಖ್ಯ ಕಾರ್ಯ ದರ್ಶಿಗೆ ಪತ್ರ ಬರೆದು ಬಾಕಿ 27.577 ಟಿಎಂಸಿ ನೀರು ಹರಿಸುವಂತೆ ಕೋರಿದ್ದರು. ಇದಕ್ಕೆ ಉತ್ತರ ಬರೆದಿದ್ದ ರಾಜ್ಯದ ಮುಖ್ಯ ಕಾರ್ಯದರ್ಶಿ, ರಾಜ್ಯದಲ್ಲಿ ತೀವ್ರ ಬರ ಗಾಲ ಇದ್ದು, ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ, ನೀರು ಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಸುಪ್ರೀಂಗೆ ಹೋಗುತ್ತಾ?

  • ಹೆಚ್ಚುವರಿ ನೀರು ಬಿಡಬೇಕೆಂದು ರಾಜ್ಯಕ್ಕೆ ಸೂಚಿಸಿದರೆ ಸಂಕಷ್ಟ
  • ಆದೇಶ ನೀಡಿದರೆ ಪಾಲಿಸುವ ಅನಿವಾರ್ಯತೆ ಕರ್ನಾಟಕದ್ದು
  • ಬಲವಂತ ಮಾಡಿದರೆ ಸುಪ್ರೀಂ ಮೆಟ್ಟಿಲೇರಬಹುದು ಸರ್ಕಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!