ದೇಶ

ಇಗ್ನೋದಲ್ಲೂ ಆನ್‍ಲೈನ್ ಪರೀಕ್ಷೆ?

Mainashree

ನವದೆಹಲಿ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೋ) ತನ್ನ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಪ್ರಸಕ್ತ ವರ್ಷದಿಂದ ಆನ್‍ಲೈನ್ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದ ಇಗ್ನೋ, ಈಗ ಆನ್ ಲೈನ್ ಪರೀಕ್ಷೆಗೂ ಅವಕಾಶ ನೀಡುವ ಪ್ರಸ್ತಾಪವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಯುಜಿಸಿ ಮುಂದಿಟ್ಟಿದೆ.

ಸರ್ಕಾರವು ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ ಎಂದು ಇಗ್ನೋ ಉಪಕುಲಪತಿ ನಾಗೇಶ್ವರ ರಾವ್ ತಿಳಿಸಿದ್ದಾರೆ. ಈಗ ನೋಂದಣಿ, ಅಡ್ಮಿಟ್ ಕಾರ್ಡ್ ವಿತರಣೆ, ಶೆಡ್ಯೂಲ್ ಅಪ್‍ಡೇಟ್ ಎಲ್ಲವೂ ಆನ್‍ಲೈನ್ ಮೂಲಕ ಆಗುತ್ತಿದೆ. ಪರೀಕ್ಷೆ ಮಾತ್ರ ಸಾಂಪ್ರದಾಯಿಕ ಮಾದರಿಯಲ್ಲೇ ನಡೆಯುತ್ತಿದ್ದು, ಅದಕ್ಕೂ ಆನ್‍ಲೈನ್ ಬಳಸುವ ಇರಾದೆ ನಮ್ಮದು ಎಂದಿದ್ದಾರೆ ರಾವ್.

SCROLL FOR NEXT