ನವದೆಹಲಿ: ಭಾರತದ ನೆರೆ ರಾಷ್ಟ್ರವಾಗಿರುವ ನೇಪಾಳದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸ್ವಲ್ಪ ಆ ಕಡೆ ಗಮನ ಹರಿಸಲಿ ಎಂದು ಬಿಜೆಪಿಯ ಹಿರಿಯ ನೇತಾರ ಯಶ್ವಂತ ಸಿನ್ಹಾ ಹೇಳಿದ್ದಾರೆ.
ಈಗ ಮೋದಿಯವರು ಅಮೆರಿಕಾದಿಂದ ಮರಳಿದ್ದಾರೆ. ನೇಪಾಳದಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದು, ಮೋದಿಯವರು ಅತ್ತ ಕಡೆ ಗಮನ ಹರಿಸಲಿ. ಭಾರತ ಆ ಕಡೆ ಗಮನ ಹರಿಸುವುದಕ್ಕೆ ವಿಳಂಬ ಮಾಡಿದರೆ ಚೀನಾ ಅದರ ಲಾಭ ಪಡೆಯಲಿದೆ ಎಂದು ಸಿನ್ಹಾ ಹೇಳಿದ್ದಾರೆ.
ಈಗಿರುವ ನೇಪಾಳದ ಪರಿಸ್ಥಿತಿಯಲ್ಲಿ ಭಾರತ ನೆರವು ನೀಡದೇ ಹೋದರೆ ಚೀನಾ ಮಧ್ಯಪ್ರವೇಶ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲಿದೆ. ಮೋದಿಯವರು ನೇಪಾಳಕ್ಕೀಗ ಆದ್ಯತೆ ನೀಡಬೇಕು ಎಂದು ಸಿನ್ಹಾ ಸಲಹೆ ನೀಡಿದ್ದಾರೆ.
ನೇಪಾಳದಲ್ಲಿ ಏನಾಗಿದೆ?: ನೇಪಾಳ ಸರಕಾರ ಇತ್ತೀಚೆಗೆ ಅಂಗೀಕರಿಸಿದ ಸಂವಿಧಾನದಲ್ಲಿನ ಕೆಲ ಅಂಶಗಳ ಬಗ್ಗೆ ಮದೇಶಿ ಹಿಂದೂ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಅಲ್ಲಿ ಭಾರೀ ಪ್ರತಿಭಟನೆಗಳು ನಡೆದು ಬರುತ್ತಿದ್ದು, ಈಗಾಗಲೇ ಇಲ್ಲಿ 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics