ನಾಪತ್ತೆಯಾದ ಬಾಲಕಿ ಅದಿತಿ (ಸಂಗ್ರಹ) 
ದೇಶ

ವಿಶಾಖಪಟ್ಟಣಂನ ಭೋಗಾಪುರ ಬೀಚ್ ನಲ್ಲಿ ಬಾಲಕಿ ಅದಿತಿ ಶವ ಪತ್ತೆ..!

ಟ್ಯೂಷನ್ ನಿಂದ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಅದಿತಿ ದೇಹ ಭೋಗಾಪುರ ಬೀಚ್ ನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ...

ವಿಶಾಖಪಟ್ಟಣಂ: ಟ್ಯೂಷನ್ ನಿಂದ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಅದಿತಿ ದೇಹ ಭೋಗಾಪುರ ಬೀಚ್ ನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಭೋಗಾಪುರ ಬೀಚ್ ನ ಸ್ಥಳೀಯರು ನೀಡಿರುವ ಮಾಹಿತಿಯಂತೆ ದಿಬ್ಬಲಪಾಲೆಂ ಸನ್ ರೇ ಬೀಚ್ ಬಳಿ ಬಾಲಕಿಯೋರ್ವಳ ಶವ ಪತ್ತೆಯಾಗಿದ್ದು, ಇದು ವಾರದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ  ಅದಿತಿಯದ್ದಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಮೋರಿಗೆ ಬಿದ್ದ ಅದಿತಿ ದೇಹ ಅಲ್ಲಿಂದ ಸಮುದ್ರ ಸೇರಿ ಬೋಗಾಪುರಂ ಬೀಚ್ ಗೆ ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.  ಪ್ರಸ್ತುತ ದೊರೆತಿರುವ ಶವದ ಮೇಲೆ ಗುಲಾಬಿ ಬಣ್ಣದ ಬಟ್ಟೆ ಇದ್ದು, ನಾಪತ್ತೆಯಾಗುವ ವೇಳೆ ಅದಿತಿ ಕೂಡ ಗುಲಾಬಿ ಬಣ್ಣದ ಬಟ್ಟೆ ಧರಿಸಿದ್ದಳು ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬಾಲಕಿ ಅದಿತಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಬಂದ ಬಳಿಕ ಪ್ರಸ್ತುತ ದೊರೆತಿರುವ  ಶವ ಬಾಲಕಿ ಅದಿತಿಯದ್ದೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.

ಕಳೆದ ಗುರುವಾರ ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿ ಅದಿತಿ ದಿಢೀರ್ ನಾಪತ್ತೆಯಾಗಿದ್ದಳು. ಸ್ಥಳೀಯ ಪೊಲೀಸರು ಕಲೆಹಾಕಿದ ಸಿಸಿಟಿವಿ ದೃಶ್ಯಾವಳಿಯ ಮೇರೆಗೆ ಮತ್ತು  ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬಾಲಕಿ ಅದಿತಿ ತೆರೆದ ಮೋರಿಗೆ ಬಿದ್ದಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವಿಶಾಖಪಟ್ಟಣ ಜಿಲ್ಲಾಡಳಿತ ಮತ್ತು ಆಂಧ್ರ ಪ್ರದೇಶ ಸರ್ಕಾರ  ಕಾರ್ಯಾಚರಣೆ ನಡೆಸಿತ್ತು.

ವಿಶಾಖಪಟ್ಟಣಂನ ಕರಾವಳಿ ಪ್ರದೇಶದಲ್ಲಿ ಮತ್ತು  ವಿಶಾಖಪಟ್ಟಣದ ರಾಜಕಾಲುವೆಗಳಲ್ಲಿ ಅದಿತಿ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಗಾಗಿ  ನೌಕಾಪಡೆಯ ಹೆಲಿಕಾಪ್ಟರ್ ಅನ್ನು ಕೂಡ ಬಳಕೆ ಮಾಡಲಾಗಿತ್ತು. ಆದರೆ ಸತತ ಒಂದು ವಾರಗಳ ಕಾರ್ಯಾಚರಣೆ ಬಳಿಕವೂ ಅದಿತಿ ದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ  ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರು ಯುವಕರ ದುರ್ಮರಣ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

SCROLL FOR NEXT