ನವದೆಹಲಿ: ಉದ್ಯಮಿ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯದಿಂದ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದು ಏ.9 ರೊಳಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.
ಬ್ಯಾಂಕ್ ಗಳಿಂದ ಪಡೆದಿರುವ 9 ಸಾವಿರ ಕೋಟಿ ರೂಪಾಯಿ ಸಾಲ ತೀರಿಸಲಾಗದೆ ಸುಸ್ತಿದಾರರಾಗಿರುವ ವಿಜಯ್ ಮಲ್ಯ ಅವರಿಗೆ ಇದು ಎರಡನೇ ಬಾರಿಗೆ ಜಾರಿ ನಿರ್ದೇಶನಲಾಯ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಮಾ.18 ರಂದು ಜಾರಿ ನಿರ್ದೇಶನಾಲಯದ ಎದುರು ಹಾಜರಾಗುವಂತೆ ಸೂಚಿಸಿ ಸಮನ್ಸ್ ಜಾರಿ ಮಾಡಲಾಗಿತ್ತು.
ಇಡಿ( ಜಾರಿ ನಿರ್ದೇಶನಾಲಯಕ್ಕೆ) ಪತ್ರ ಬರೆದಿದ್ದ ವಿಜಯ್ ಮಲ್ಯ ಕಾಲಾವಕಾಶ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಏ. ೨ ರಂದು ಹಾಜರಾಗುವಂತೆ ಸೂಚಿಸಿತ್ತು. ಏ.2 ರಂದು ಮತ್ತೊಮ್ಮೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಬಾರಿ ಜಾರಿ ಮಾಡಿರುವ ಸಮನ್ಸ್ ನಲ್ಲಿ ಏ.9 ರೊಳಗೆ ಹಾಜರಾಗುವಂತೆ ವಿಜಯ್ ಮಲ್ಯ ಅವರಿಗೆ ಸೂಚನೆ ನೀಡಲಾಗಿದೆ.