ದೇಶ

ಟೀಂ ಇಂಡಿಯಾ ಸೋಲು: ಶ್ರೀನಗರ ಎನ್‌ಐಟಿಯಲ್ಲಿ ಸಂಘರ್ಷ

Rashmi Kasaragodu
ಶ್ರೀನಗರ: ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪರಾಭವಗೊಂಡ ಹಿನ್ನಲೆಯಲ್ಲಿ ಶ್ರೀನಗರದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಘರ್ಷವುಂಟಾಗಿದ್ದು, ಪ್ರಸ್ತುತ ಕಾಲೇಜ್‌ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಟೀಂ ಇಂಡಿಯಾದ ಪರಾಭವದ ಬಗ್ಗೆ ವಾಗ್ವಾದ ನಡೆದು ವಿದ್ಯಾರ್ಥಿಗಳ ಎರಡು ಗುಂಪಿನ ಮಧ್ಯೆ ಸಂಘರ್ಷವೇರ್ಪಟ್ಟಿತ್ತು. ಶುಕ್ರವಾರ ವಿದ್ಯಾರ್ಥಿಗಳ ನಡುವೆ ಸಂಘರ್ಷವೇರ್ಪಟ್ಟಿದ್ದು, ಮುಂದಿನ ಆದೇಶ ಲಭಿಸುವವರೆಗೆ ಎನ್‌ಐಟಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕೃತರು ಹೇಳಿದ್ದಾರೆ. 
ಸೆಮಿಫೈನಲ್‌ನಲ್ಲಿ ಪಂದ್ಯ ಸೋತಿದ್ದಕ್ಕೆ ಕೆಲವೊಂದು ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಕಾಶ್ಮೀರದ ವಿದ್ಯಾರ್ಥಿಗಳೇ ಈ ರೀತಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದನ್ನು ಇತರ ರಾಜ್ಯಗಳ ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಅಲ್ಲಿ ಜಗಳವಾಗಿತ್ತು.
ಆದಾಗ್ಯೂ, ವಿದ್ಯಾರ್ಥಿಗಳ ಜಗಳವನ್ನು ನಿಯಂತ್ರಿಸಲು ಪೊಲೀಸರನ್ನು ಕರೆತರಲಾಗಿತು. ಸಂಘರ್ಷದ ನಡುವೆ ಕಾಲೇಜಿನ ಸ್ವತ್ತುಗಳಿಗೂ ಹಾನಿಯಾಗಿದ್ದು, ಇದೀಗ ಅನಿರ್ದಿಷ್ಟಾವಧಿವರೆಗೆ ಕಾಲೇಜು ಮುಚ್ಚಲು ಕಾಲೇಜು ಅಧಿಕೃತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
SCROLL FOR NEXT