ಸುಷ್ಮಾ ಸ್ವರಾಜ್ 
ದೇಶ

ನಾಲ್ವರು ಭಾರತೀಯರನ್ನು ಬಿಡುಗಡೆ ಮಾಡಿದ ಸಿರಿಯಾ

ನಿಯಮಬದ್ಧವಾದ ಪ್ರವಾಸಿ ದಾಖಲೆಗಳು ಇಲ್ಲದೇ ಸಮರಗ್ರಸ್ತ ಸಿರಿಯಾ ಪ್ರವೇಶಿಸಿದ್ದಕ್ಕಾಗಿ ಅಲ್ಲಿನ ಸರ್ಕಾರದಿಂದ ಬಂಧಿತರಾಗಿದ್ದ ನಾಲ್ವರು ಭಾರತೀಯರನ್ನು ..

ನವದೆಹಲಿ: ನಿಯಮಬದ್ಧವಾದ ಪ್ರವಾಸಿ ದಾಖಲೆಗಳು ಇಲ್ಲದೇ ಸಮರಗ್ರಸ್ತ ಸಿರಿಯಾ ಪ್ರವೇಶಿಸಿದ್ದಕ್ಕಾಗಿ ಅಲ್ಲಿನ ಸರ್ಕಾರದಿಂದ ಬಂಧಿತರಾಗಿದ್ದ ನಾಲ್ವರು ಭಾರತೀಯರನ್ನು ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರು, ಬಿಡುಗಡೆಗೊಂಡಿರುವ ನಾಲ್ವರೂ ಭಾರತೀಯರನ್ನು ತಾಯ್ನೆಲಕ್ಕೆ ಸ್ವಾಗತಿಸಿ, ಅವರ ಬಿಡುಗಡೆ ನಿಟ್ಟಿನಲ್ಲಿ ಸಹಕರಿಸಿದ ಸಿರಿಯಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಕಳೆದ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಿರಿಯಾದ ಪ್ರಧಾನಿ ವಲೀದ್ ಅಲ್ ಮೌಲೆಮ್ ಅವರಲ್ಲಿ ನಾನು ನಾಲ್ವರು ಭಾರತೀಯರನ್ನು ಬಿಡುಗಡೆ ಮಾಡುವಂತೆ ಕೋರಿಕೊಂಡಿದ್ದೆ. ಧನ್ಯವಾದಗಳು ಸಿರಿಯಾ. ಅರುಣ್ ಕುಮಾರ್ ಸೈನಿ, ಸರ್ವಜಿತ್ ಸಿಂಗ್, ಕುಲದೀಪ್ ಸಿಂಗ್ ಮತ್ತು ಜೋಗಾ ಸಿಂಗ್- ನಿಮಗೆಲ್ಲರಿಗೂ ಭಾರತೀಯ ನೆಲಕ್ಕೆ ಸ್ವಾಗತ. ಸಿರಿಯಾದಿಂದ ಭಾರತಕ್ಕೆ ಪಯಣಿಸುವ ನಿಟ್ಟಿನಲ್ಲಿ ಇವರಿಗೆ ಸಹಕರಿಸಿದ ಸಿರಿಯಾದ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು’ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!