ದೇಶ

ಕಲಾಂ, ಅಬ್ದುಲ್ ಹಮೀದ್ 'ಭಾರತ್ ಮಾತಾ ಕಿ ಜೈ ಎಂದಿದ್ದರು': ರವಿ ಶಂಕರ್ ಪ್ರಸಾದ್

Manjula VN

ಮಥುರಾ: ಅಬ್ದುಲ್ ಕಲಾಂ ಆಜಾದ್ ಹಾಗೂ ಅಬ್ದುಲ್ ಹಮೀದ್ ಅವರು ಭಾರತ್ ಮಾತಾ ಕಿ ಜೈ ಎಂದಿದ್ದರು. ಭಾರತದ ಪರ ಘೋಷಣೆ ಹೃದಯ ಪೂರ್ವಕವಾಗಿ ಬರಬೇಕೆಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಶನಿವಾರ ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಹಾಗೂ ಭಾರತದ ಅನೇಕ ನಾಯಕರು ತಮ್ಮ ಕೊನೆಯ ಕ್ಷಣದಲ್ಲೂ ಭಾರತ್ ಮಾತಾ ಕಿ ಜೈ ಎಂದು ಹೇಳುವ ಮೂಲಕ ಉಸಿರು ಬಿಡುತ್ತಿದ್ದರು.

ಇನ್ನು ಅಬ್ದುಲ್ ಕಲಾಂ ಆಜಾದ್ ಹಾಗೂ ಅಬ್ದುಲ್ ಹಮೀದ್ ಅವರು ಕೂಡ ಭಾರತ್ ಮಾತಾ ಕಿ ಜೈ ಎಂದಿದ್ದರು. ಭಾರತ ಮಾತಾ ಕಿ ಜೈ ಘೋಷಣೆ ಯಾವುದೇ ವಿರೋಧವಿಲ್ಲದೆಯೇ ಹೃದಯಪೂರ್ವಕವಾಗಿ ಬರಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಕೋಲ್ಕತಾದಲ್ಲಿ ಸಂಭವಿಸಿದ ಫ್ಲೈ ಓವರ್ ದುರಂತ ಪ್ರಕರಣ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು, ಫ್ಲೈ ಓವರ್ ಘಟನೆಯೊಂದು ದುರಾದೃಷ್ಟಕರ. ಪ್ರಕರಣ ಸಂಬಂಧ ನ್ಯಾಯೋಚಿತ ತನಿಖೆಯಾಗಬೇಕು. ತಪ್ಪಿತಸ್ಥರು ನಾಯಕರೇ ಆಗಲಿ, ಅಧಿಕಾರಿಯಾಗಲು ಅವರನ್ನು ಬಿಡದೆ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.

SCROLL FOR NEXT