ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣ ತನಿಖೆ ನಡೆಸಲು ಪಾಕಿಸ್ತಾನ ಜಂಟಿ ತನಿಖಾ ಸಮಿತಿ ಭಾರತಕ್ಕೆ ಆಗಮಿಸಿದ್ದು ಕಣ್ಣೊರೆಸುವ ತಂತ್ರವಷ್ಟೇ ಎಂದು ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ತಾನದ ಕೆಲವು ಮಾಧ್ಯಮಗಳು ಪಠಾಣ್ ಕೋಟ್ ದಾಳಿ ಸಂಬಂಧ ವರದಿ ಮಾಡಿತ್ತು. ದಾಳಿ ಸಂಬಂಧ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಿರುವುದು ಕಣ್ಣೊರೆಸುವ ತಂತ್ರ. ಇಸ್ಲಾಮಾಬಾದ್ ಈ ವಿಚಾರದಲ್ಲಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿತ್ತು. ಒಂದು ವೇಳೆ ಮಾಧ್ಯಮಗಳ ವರದಿಗಳು ಸತ್ಯವಾದರೆ. ಇದು ನಿಜಕ್ಕೂ ಗಂಭೀರ ವಿಚಾರವಾಗುತ್ತದೆ ಎಂದು ಹೇಳಿದ್ದಾರೆ.
ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹಾಗೂ ಅಲ್ಲಿನ ಆಂತರಿಕ ಗುಪ್ತಚರ ಇಲಾಖೆಗಳು ಪಾಕಿಸ್ತಾನ ಸೇನೆಗ ಬದಲಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಏನಾದರೂ ನಿರ್ಧಾರ ತೆಗೆದುಕೊಂಡರೆ, ಈ ವಿಚಾರ ಜೆಇಎಂ, ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಆಂತರಿಕ ಸೇವಾ ಇಲಾಖೆಗಳಿಗೆ ತಿಳಿಯುತ್ತದೆ. ಹೀಗಾಗಿ ಅವರು ತಮ್ಮ ಪ್ರತಿನಿಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವರದಿ ಮಾಡಿತ್ತು.
ಇನ್ನು ಈ ವರದಿಗಳು ನಮ್ಮಲ್ಲಿರುವ ಪಾಕಿಸ್ತಾನದ ಮೇಲಿನ ಶಂಕೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಕೂಡ ಅವರು ತಮ್ಮ ಸೇನೆ ಹಾಗೂ ಆಂತರಿಕ ಸೇವಾ ಇಲಾಖೆಗಳನ್ನು ವಿರೋಧಿಸುವ ಪರಿಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನ ಮಾಧ್ಯಮಗಳು, ಪಠಾಣ್ ಕೋಟ್ ದಾಳಿ ಸಂಬಂಧ ಭಾರತಕ್ಕೆ ಭೇಟಿ ನೀಡುತ್ತಿರುವ ಅಧಿಕಾರಿಗಳನ್ನು ಬದಲಿ ಮಾರ್ಗದೊಂದಿಗೆ ಭಾರತದ ವಾಯುನೆಲೆಗೆ ಹೋಗಲು ಅನುಮತಿ ನೀಡಲಾಗಿತ್ತು. ಇದರಂತೆ ಕೇವಲ 55 ನಿಮಿಷದಲ್ಲಿ ತನಿಖಾ ತಂಡ ಮುಖ್ಯದ್ವಾರದ ಮೂಖಾಂತರವಲ್ಲದೇ ಸೇನಾ ಸೌಲಭ್ಯ ಮೂಲಕ ಬದಲಿ ಮಾರ್ಗದೊಂದಿಗೆ ಭೇಟಿ ನೀಡಿದೆ ಎಂದು ಹೇಳಿತ್ತು.
ಪಠಾಣ್ ಕೋಟ್ ದಾಳಿ ಸಂಬಂಧ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ ಜಂಟಿ ತನಿಖಾ ತಂಡ ಧೀರ್ಘಾಕಾಲಿಕ ತನಿಖೆ ನಡೆಸಿ ಶುಕ್ರವಾರವಷ್ಟೇ ಪಾಕಿಸ್ತಾನಕ್ಕೆ ಹಿಂತಿರುಗಿತ್ತು.