ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ 
ದೇಶ

ಏನಿದು ಪನಾಮಾ ಪೇಪರ್ಸ್ ಸೋರಿಕೆ?

ಪತ್ರಿಕೋದ್ಯಮ ಜಗತ್ತಿನ ಇತಿಹಾಸದಲ್ಲಿ ಬಹಿರಂಗಗೊಂಡ ಅತ್ಯಂತ ದೊಡ್ಡ ಸೋರಿಕೆ ಪನಾಮಾ ಪೇಪರ್ಸ್ ಸೋರಿಕೆ ಎಂದು...

ಮುಂಬೈ: ಪತ್ರಿಕೋದ್ಯಮ ಜಗತ್ತಿನ ಇತಿಹಾಸದಲ್ಲಿ ಬಹಿರಂಗಗೊಂಡ ಅತ್ಯಂತ ದೊಡ್ಡ ಸೋರಿಕೆ ಪನಾಮಾ ಪೇಪರ್ಸ್ ಸೋರಿಕೆ ಎಂದು ಪರಿಗಣಿಸಲಾಗಿದೆ.

ಜಗತ್ತಿನಾದ್ಯಂತದ ಸಿರಿವಂತರು ತಮ್ಮ ಭಾರೀ ಪ್ರಮಾಣದ ಕಪ್ಪು ಹಣವನ್ನು ತೆರಿಗೆದಾರರ ಸ್ವರ್ಗವೆಂದೇ ಪರಿಗಣಿತವಾಗಿರುವ ಪನಾಮಾದಲ್ಲಿ ಇರಿಸಿರುವುದನ್ನು ಮೊಸ್ಸಾಕ್ ಫೊನ್ಸಿಕಾ ಸಂಸ್ಥೆ "ಪನಾಮಾ ದಾಖಲೆಪತ್ರಗಳ ಮೂಲಕ' ಬಹಿರಂಗಪಡಿಸಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಪಟ್ಟಿಯಲ್ಲಿ 500 ಮಂದಿ ಭಾರತೀಯರಿದ್ದಾರೆ. ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ರೈ, ರಿಯಲ್ಟಿ ಉದ್ಯಮಿ ಕೆ ಪಿ ಸಿಂಗ್‌, ಇಂಡಿಯಾ ಬುಲ್ಸ್‌ ಮಾಲಕ ಸಮೀರ್‌ ಗೆಹ್ಲೋಟ್ ಪ್ರಮುಖರು.

ಪನಾಮಾ ಪೇಪರ್ ಎಂದೇ ಖ್ಯಾತವಾಗಿರುವ ವಿಶ್ವಾದ್ಯಂತದ ಸಿರಿವಂತರ ಕಪ್ಪು ಹಣದ ರಹಸ್ಯಗಳನ್ನು ಒಳಗೊಂಡ ದಾಖಲೆಪತ್ರಗಳು ಪನಾಮಾ ಮೂಲದ ಮೊಸ್ಸಾಕ್‌ ಫೊನೆಸ್ಕಾ ಎಂಬ ಕಾನೂನು ಸಂಸ್ಥೆಯ ರಹಸ್ಯ ಕಡತಗಳ ಭಾಗವಾಗಿದ್ದು ಇವು 1.10 ಕೋಟಿ ಸಂಖ್ಯೆಯ ದಾಖಲೆ ಪತ್ರಗಳನ್ನು ಒಳಗೊಂಡಿವೆ. ಜಗತ್ತಿನಲ್ಲಿಯೇ ಪನಾಮಾ ಪೇಪರ್ಸ್ ಅತಿದೊಡ್ಡ ಸಮೂಹವಾಗಿದೆ. ಕಳೆದೊಂದು ವರ್ಷದಲ್ಲಿ ಸುಮಾರು ಸುಮಾರು 80 ದೇಶಗಳ 400 ಮಂದಿ ಪತ್ರಕರ್ತರು 100 ಕ್ಕೂ ಹೆಚ್ಚು ಮಾಧ್ಯಮದವರು ದಾಖಲೆಗಳನ್ನು ಸಂಶೋಧನೆ ಮಾಡುವುದರಲ್ಲಿ ನಿರತರಾಗಿದ್ದರು. ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ, ಗಾರ್ಡಿಯನ್, ಸ್ಯೂಡಾಶ್‌ ಝೀಟಂಗ್‌, ಫಾಲ್ಟರ್ ಮೊದಲಾದವು ಈ ಕುರಿತು ಕೆಲಸ ಮಾಡಿವೆ. ಪನಾಮಾ ಸಹಿತವಾಗಿ ವಿಶ್ವದ ವಿವಿಧ ತೆರಿಗೆದಾರರ ಸ್ವರ್ಗಗಳೆಂದೇ ಕುಖ್ಯಾತಿ ಹೊಂದಿರುವ ತಾಣಗಳಲ್ಲಿ ಭಾರತೀಯರ ಸಹಿತ ವಿಶ್ವದಾದ್ಯಂತದ ಸಿರಿವಂತರು ಕೂಡಿ ಹಾಕಿರುವ ಕಪ್ಪು ಹಣದ ಮಾಹಿತಿಗಳನ್ನು ಪನಾಮಾ ದಾಖಲೆಪತ್ರಗಳು ಹೊಂದಿವೆ.

ತೆರಿಗೆದಾರ ಸ್ವರ್ಗ ಎನಿಸಿಕೊಂಡಿರುವ ದೇಶಗಳಲ್ಲಿ ಸಾಗರೋತ್ತರ ಕಂಪೆನಿಗಳನ್ನು ಹುಟ್ಟು ಹಾಕಿ ಅವುಗಳ ಮೂಲಕ ತಮ್ಮ ದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ತೆರಿಗೆ ರಿಯಾಯಿತಿ ಇತ್ಯಾದಿ ಲಾಭ ಪಡೆದುಕೊಂಡು, ತಮ್ಮ ಸಂಪತ್ತನ್ನು ಆ ದೇಶಗಳಲ್ಲಿ ಶೇಖರಿಸಿಡುವುದು ಸಾಮಾನ್ಯವಾಗಿ ಅನುಸರಿಸಲಾಗುತ್ತಿರುವ ಉಪಾಯವಾಗಿದೆ.

ಪನಾಮಾ ಮೂಲದ ಈ ಕಾನೂನು ಸಂಸ್ಥೆಯ ನಿಗೂಢ ಕಪ್ಪು ಹಣ ದಾಖಲೆಪತ್ರಗಳನ್ನು ಜರ್ಮನಿಯ ಸ್ಯೂಡಾಶ್‌ ಝೀಟಂಗ್‌ ಎಂಬ ದೈನಿಕಕ್ಕೆ ಸೋರಿಕೆ ಮಾಡಿದವರು ಯಾರು ಎಂಬುದು ಈಗಿನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಮಾತ್ರವಲ್ಲ ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಕೂಟವು (ಐಸಿಐಜೆ) ಜಾಗತಿಕ ಮಾಧ್ಯಮದೊಡನೆ ಹಂಚಿಕೊಳ್ಳಲು ಯಾರು ಕಾರಣ ಎಂಬುದು ಕೂಡ ಗೊತ್ತಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!