ದೇಶ

ನಮ್ಮ ಬಳಿ ಬಲವಾದ ಸಾಕ್ಷ್ಯಗಳಿವೆ: ಪಾಕ್ ಮಾಧ್ಯಮದ ವರದಿಯನ್ನು ತಳ್ಳಿ ಹಾಕಿದ ಭಾರತ

Sumana Upadhyaya

ನವದೆಹಲಿ/ಇಸ್ಲಾಮಾಬಾದ್: ಪಠಾಣ್ ಕೋಟ್ ವಾಯು ನೆಲೆ ಮೇಲೆ ಜನವರಿ 2ರಂದು ನಡೆದ ದಾಳಿಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನ ಕೈವಾಡವಿರುವುದರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಳಿ ಬಲವಾದ ಸಾಕ್ಷ್ಯಾಧಾರಗಳಿಲ್ಲ ಎಂಬ ಪಾಕಿಸ್ತಾನದ ವರದಿಯನ್ನು ಭಾರತದ ಅಧಿಕಾರಿಗಳು ಮಂಗಳವಾರ ತಳ್ಳಿ ಹಾಕಿದ್ದಾರೆ.

ಪಾಕಿಸ್ತಾನ ಕೋರ್ಟ್ ನಲ್ಲಿ ಕೂಡ ಸಾಬೀತುಪಡಿಸುವಷ್ಟು ಬಲವಾದ ಸಾಕ್ಷಿಗಳು ಭಾರತದಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಗ್ರರ ದಾಳಿ ಪ್ರಕರಣ ಪಾಕಿಸ್ತಾನದ ತೇಜೋವಧೆ ಮಾಡಲು ಭಾರತ ರೂಪಿಸಿದ ನಾಟಕ ಎಂದು ಪಾಕಿಸ್ತಾನದ ಜಂಟಿ ತನಿಖಾ ತಂಡ ಭಾರತಕ್ಕೆ ಬಂದು ಹೋದ ಮೇಲೆ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದ್ದು, ಇದು ಪಾಕಿಸ್ತಾನ ಮಿಲಿಟರಿಯ ಈಗೊಂದು ಮತ್ತೊಂದು ಆಡುವ ಎರಡು ನಾಲಗೆ ಬುದ್ದಿಯನ್ನು ತೋರಿಸುತ್ತದೆ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.

ಪಾಕಿಸ್ತಾನ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿಯೂ ಸಾಬೀತುಪಡಿಸುವ ಸಾಕ್ಷ್ಯಗಳು ನಮ್ಮಲ್ಲಿವೆ. ಪಾಕಿಸ್ತಾನದಿಂದ ಬಂದ ಜಂಟಿ ತನಿಖಾ ತಂಡಕ್ಕೆ ನಾವು, ಈ ಕೇಸಿನಲ್ಲಿ ಮಸೂದ್ ಅಜರ್ ನನ್ನು ಬಂಧಿಸಬೇಕೆಂದು ನಾವು ಹೇಳಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಷ್ಟ್ರೀಯ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡಿದ ಪಾಕ್ ತಂಡ ಎಲ್ಲಾ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದೆ. ಅದು ಪಾಕಿಸ್ತಾನದ ಕಾನೂನಿನ ಪ್ರಕಾರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರಿಂದ ಆ ದೇಶಕ್ಕೆ ಬೇಕಾದಂತೆ ವರದಿ ನೀಡುತ್ತದೆ ಎಂದರು.

ಪಾಕಿಸ್ತಾನ ಮಾಧ್ಯಮದ ವರದಿಯನ್ನು ''ಇದೊಂದು ಒಟ್ಟು ಸಮ್ಮಿಶ್ರಣವಾಗಿದ್ದು'' ಪಾಕಿಸ್ತಾನ ಗೊಂದಲ ಸೃಷ್ಟಿಸಲು ಬಯಸುತ್ತದೆ.ಆದರೆ ಭಾರತ ಆ ಮೋಸದ ಬಲೆಗೆ ಬೀಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದೆ ಮತ್ತು ತಾವು ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಅಧಿಕಾರಿಗಳು ಸಹಕಾರ ನೀಡಲಿಲ್ಲ ಎಂಬ ಪಾಕ್ ತಂಡದ ಆರೋಪವನ್ನು ಕೂಡ ಭಾರತ ತಳ್ಳಿ ಹಾಕಿದೆ.

SCROLL FOR NEXT