ದೇಶ

ಕೋಲ್ಕತಾ ಫ್ಲೈ ಓವರ್ ದುರಂತ: ಐವಿಆರ್'ಸಿಎಲ್ ಅಧಿಕಾರಿಗೆ 5 ದಿನ ಪೊಲೀಸ್ ಕಸ್ಟಡಿ

Manjula VN

ಕೋಲ್ಕತಾ: ಉತ್ತರ ಕೋಲ್ಕತಾ ಫ್ಲೈ ಓವರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದ ಹೈದರಾಬಾದ್ ಮೂಲದ ಐವಿಆರ್'ಸಿಎಲ್ ಕಂಪನಿಯ ಉಪಾಧ್ಯಕ್ಷನಿಗೆ ಸ್ಥಳೀಯ ನ್ಯಾಯಾಲಯ 5 ಕಾಲ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.

ಪ್ರಕರಣ ಸಂಬಂಧ ಕಂಪನಿಗೆ ಸೇರಿದ ಹಿರಿಯ ಅಧಿಕಾರಿಯನ್ನು ಈಗಾಗಲೇ ಬಂಧನಕ್ಕೊಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ತನಿಖೆ ನಡೆಸಬೇಕಾದ ಅಗತ್ಯವಿರುವುದರಿಂದ ಇದೀಗ ನ್ಯಾಯಾಲಯವು ಕಂಪನಿ ಉಪಾಧ್ಯಕ್ಷರಾಗಿರುವ ರಂಜಿತ್ ಭಟ್ಟಾಚಾರ್ಯ ಅವರಿಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ.

ಉತ್ತರ ಕೊಲ್ಕತ್ತಾದ ಬಾಬಾ ಬಜಾರ್‌ನಲ್ಲಿರುವ ಹಳೆಯ ಗಣೇಶ್ ಟಾಕೀಸ್ (ಗಿರೀಶ್ ಪಾರ್ಕ್) ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಫ್ಲೈಓವರ್ ಕುಸಿದು ಬಿದ್ದಿತ್ತು. ಫ್ಲೈ ಓವರ್ ಕುಸಿದ ಪರಿಣಾಮ ಸೇತುವೆ ಕೆಳಗಿದ್ದ ಹಲವು ಸುಮಾರು 24 ಮಂದಿ ಸಾವನ್ನಪ್ಪಿ, ಹಲವರು ಅವಶೇಷಗಳಿಡಿ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು 90ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದರು.

ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಕಂಪನಿಯು ಪಶ್ಚಿಮ ಬಂಗಾಳ ಸರ್ಕಾರ ನಮಗೆ ಈ ಕೆಲಸವನ್ನು ವಹಿಸಿತ್ತು. ನಾವು ಈ ಕೆಲಸವನ್ನು ಮಾಡುತ್ತಿದ್ದೇವೆ. ಈಗಾಗಲೇ ಇದರ ನಿರ್ಮಾಣ ಕಾರ್ಯವನ್ನು ಶೇ.60-75 ರಷ್ಟು ಮುಕ್ತಾಯಗೊಳಿಸಲಾಗಿದೆ. ಉಳಿದ ಕಾರ್ಯವನ್ನು ಮಾಡಲಾಗುತ್ತಿತ್ತು. ಆದರೆ, ಇಷ್ಟರ ಮಧ್ಯದಲ್ಲೇ ಘಟನೆ ನಡೆದಿರುವುದು ದುರ್ದೈವ.

27 ವರ್ಷಗಳಿಂದ ನಾವು ಸಾಕಷ್ಟು ಸೇತುವೆಗಳನ್ನು ನಿರ್ಮಾಣ ಮಾಡಿದ್ದೇವೆ. ಆದರೆ, ಈ ರೀತಿಯಾಗಿ ಎಂದೂ ಆಗಿಲ್ಲ. ಘಟನೆಯಿಂದ ಸಂಸ್ಥೆಕೂಡ ಆಘಾತ ವ್ಯಕ್ತಪಡಿಸಿದೆ ಎಂದು ಹೇಳಿತ್ತು.

ದುರ್ಘಟನೆ ಸಂಬಂಧ ಕೋಲ್ಕತಾ ಪೊಲೀಸರು ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 304 (ಕೊಲೆ ಪ್ರಮಾಣವಲ್ಲದ ಖಂಡನೀಯ ನರಹತ್ಯೆ), 308 (ಖಂಡನೀಯ ನರಹತ್ಯೆ ಯತ್ನ) ಮತ್ತು 407ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

SCROLL FOR NEXT