ದೇಶ

ಐಐಟಿ ಶುಲ್ಕ 90 ಸಾವಿರದಿಂದ 2 ಲಕ್ಷಕ್ಕೆ ಹೆಚ್ಚಳ

Sumana Upadhyaya

ನವದೆಹಲಿ: ದೇಶದ ಪ್ರತಿಷ್ಟಿತ ಭಾರತೀಯ ತಾಂತ್ರಿಕ ಸಂಸ್ಥೆಗಳಲ್ಲಿ ಅಧ್ಯಯನ ವೆಚ್ಚ ದುಪ್ಪಟ್ಟಾಗಿದೆ. ವರ್ಷಕ್ಕೆ ಶುಲ್ಕವನ್ನು 90 ಸಾವಿರದಿಂದ 2 ಲಕ್ಷಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಐಐಟಿ ಮಂಡಳಿ ವಿದ್ಯಾರ್ಥಿಗಳ ಶುಲ್ಕವನ್ನು ವರ್ಷಕ್ಕೆ ಮೂರು ಲಕ್ಷದವರೆಗೆ ಹೆಚ್ಚಿಸಲು ಶಿಫಾರಸ್ಸು ಮಾಡಿತ್ತು. ಐಐಟಿ ಮುಂಬೈಯ ನಿರ್ದೇಶಕ ದೇವಾಂಗ್ ಖಾಖರ್  ಅವರನ್ನೊಳಗೊಂಡ ಸಮಿತಿ ನೀಡಿದ ಶಿಫಾರಸ್ಸಿನಂತೆ ಶುಲ್ಕ ಹೆಚ್ಚಳ ಮಾಡಲಾಗಿದೆ.

ಏಕಾಏಕಿ ದುಪ್ಪಟ್ಟಿಗಿಂತ ಹೆಚ್ಚು ಶುಲ್ಕ ಮಾಡಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

SCROLL FOR NEXT