ಹಿತೇಶ್ ಮತ್ತು ಎಮಿಲಿ 
ದೇಶ

ಫೇಸ್ ಬುಕ್ ನಲ್ಲಿ ಪ್ರೇಮಾಂಕುರ: ಸ್ಲಂ ಹುಡುಗನ ವರಿಸಿದ ಅಮೆರಿಕ ಮಹಿಳೆ

ಫೇಸ್ ಬುಕ್ ನಲ್ಲಿ ಪರಿಚಯವಾದ ಅಮೆರಿಕಾ ಮಹಿಳೆ ಗುಜರಾತ್ ನ ಸ್ಲಂ ನಿವಾಸಿಯನ್ನು ವಿವಾಹವಾಗಿರುವ ಅಪರೂಪದ ಪ್ರಕರಣ ವರದಿಯಾಗಿದೆ. ಫೇಸ್ ಬುಕ್ ನಲ್ಲಿ ...

ಅಹಮದಾಬಾದ್: ಫೇಸ್ ಬುಕ್ ನಲ್ಲಿ ಪರಿಚಯವಾದ ಅಮೆರಿಕಾ ಮಹಿಳೆ ಗುಜರಾತ್ ನ ಸ್ಲಂ ನಿವಾಸಿಯನ್ನು ವಿವಾಹವಾಗಿರುವ ಅಪರೂಪದ ಪ್ರಕರಣ ವರದಿಯಾಗಿದೆ. ಫೇಸ್ ಬುಕ್ ನಲ್ಲಿ ಹುಟ್ಟೋ ಪ್ರೇಮ ನಿಜವಲ್ಲ ಎಂದು ಮೂಗುಮುರಿಯುವ ಹೊತ್ತಿನಲ್ಲಿ ಈ ಪ್ರಕರಣ ನಿಜಕ್ಕೂ ಅಚ್ಚರಿ ಮೂಡಿಸಿದೆ.

ಗುಜರಾತ್​ನ ಬೃಹತ್ ನಗರ ಅಹಮದಾಬಾದ್​ನ ‘ಸ್ಲಂ ಬಾಯ್’ ಹಿತೇಶ್ (23) ಹಾಗೂ ಅಮೆರಿಕದ ಎಮಿಲಿ ಚಾವ್ಡಾ (41) ನಡುವಿನ ಫೇಸ್​ಬುಕ್ ಪ್ರೇಮ ಪ್ರಹಸನ ಮದುವೆ ಮೂಲಕ ಅಂತ್ಯಗೊಂಡಿದೆ. ಎಮಿಲಿ ಹಿತೇಶ್​ರನ್ನು ಕಣ್ಣಾರೆ ನೋಡಿದ್ದೇ ಮದುವೆಯಾದ ದಿನ ಅನ್ನೋದು ಇನ್ನೊಂದು ವಿಶೇಷ.

ಒಂದು ವರ್ಷದ ಹಿಂದೆ ನಿರುದ್ಯೋಗಿ ಹಿತೇಶ್ ಮತ್ತು ಎಮಿಲಿ ಫೇಸ್​ಬುಕ್​ನಲ್ಲಿ ಸ್ನೇಹಿತರಾದರು. ಹಿತೇಶ್ ಯಾರು, ಏನು ಎನ್ನುವ ವಿಚಾರ ಎಮಿಲಿಗೆ ಗೊತ್ತಿರಲಿಲ್ಲ. ಹಾಗೇ ಎಮಿಲಿ ಯಾರು, ಏನು ಅನ್ನೋದು ಹಿತೇಶ್​ಗೆ ಗೊತ್ತಿರಲಿಲ್ಲ.

ಇಬ್ಬರ ನಡುವೆ ಹಾಯ್, ಬಾಯ್ ಸಂಭಾಷಣೆ ಅನೇಕ ದಿನಗಳ ತನಕ ಮುಂದುವರಿದಿತ್ತು. ಹಿತೇಶ್ ಹಿಂದಿಯಲ್ಲಿ ತನ್ನ ಸಂದೇಶಗಳನ್ನು ಬರೆದು ಅದನ್ನು ಇಂಗ್ಲಿಷ್​ಗೆ ಭಾಷಾಂತರಿಸಿಕೊಂಡು ಎಮಿಲಿಗೆ ಕಳುಹಿಸುತ್ತಿದ್ದರಂತೆ. ಹಾಗೇ ಎಮಿಲಿ ಕಳುಹಿಸಿದ ಸಂದೇಶವನ್ನು ಮತ್ತೆ ಹಿಂದಿಗೆ ಭಾಷಾಂತರಿಸಿಕೊಂಡು ಅರ್ಥ ಮಾಡಿಕೊಳ್ಳುತ್ತಿದ್ದರಂತೆ.

ಇದೇ ಸ್ನೇಹ ಪ್ರೀತಿಯಾಗಿ ಮುಂದುವರಿದಿದೆ. ಇಬ್ಬರೂ ಒಂದಿಷ್ಟು ದಿನ ಫೇಸ್​ಬುಕ್ ಸಂಭಾಷಣೆಯ ಮೂಲಕವೇ ಪ್ರೀತಿಯ ವಿನಿಮಯ ಮಾಡಿಕೊಂಡಿದ್ದಾರೆ. ಮದುವೆಯಾಗಲೂ ನಿರ್ಧರಿಸಿದರು. ಇಷ್ಟೆಲ್ಲಾ ಆದ ಬಳಿಕ ಕೆಲ ದಿನಗಳ ಕಾಲ ಇಬ್ಬರೂ ವಿಡಿಯೋ ಚಾಟ್ ಕೂಡ ನಡೆಸಿದ್ದರಂತೆ.

ಅಂತೂ ಕಳೆದವಾರ ಅಹಮದಾಬಾದ್​ಗೆ ಬಂದ ಎಮಿಲಿ, ಹಿಂದು ಧರ್ಮದ ಸಂಪ್ರದಾಯದಂತೆ ಹಿತೇಶ್​ನನ್ನು ಮದುವೆಯಾಗಿ, ಎಲ್ಲರ ವಿಶ್ವಾಸ ಗೆದ್ದು ಅಮೆರಿಕಕ್ಕೆ ಕರೆದೊಯ್ದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NCERT row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

SCROLL FOR NEXT