ನಕ್ಸಲ್ ನಿಗ್ರಹಕ್ಕಾಗಿ ಒಡಿಶಾ ಸರ್ಕಾರದಿಂದ 13 ವರ್ಷಗಳಲ್ಲಿ 3 ,000 ಕೋಟಿ ಖರ್ಚು 
ದೇಶ

ನಕ್ಸಲ್ ನಿಗ್ರಹಕ್ಕಾಗಿ ಒಡಿಶಾ ಸರ್ಕಾರದಿಂದ 13 ವರ್ಷಗಳಲ್ಲಿ 3 ,000 ಕೋಟಿ ಖರ್ಚು

ಒಡಿಶಾ ರಾಜ್ಯ ಸರ್ಕಾರ ನಕ್ಸಲ್ ನಿಗ್ರಹಕ್ಕೆ 13 ವರ್ಷಗಳಲ್ಲಿ 3 ,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.


ಭುವನೇಶ್ವರ:
ಒಡಿಶಾ ರಾಜ್ಯ ಸರ್ಕಾರ ನಕ್ಸಲ್ ನಿಗ್ರಹಕ್ಕೆ 13 ವರ್ಷಗಳಲ್ಲಿ 3 ,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಇಂಟಿಗ್ರೇಟೆಡ್ ಆಕ್ಷನ್ ಪ್ಲಾನ್, ಸುರಕ್ಷತಾ ಸಂಬಂಧಿ ವೆಚ್ಚ, ವಿಶೇಷ ಮೂಲ ಸೌಕರ್ಯ ಯೋಜನೆ, ಪೊಲೀಸ್ ಪಡೆಗಳ ಆಧುನೀಕರಣ, ಭಯೋತ್ಪಾದನಾ ನಿಗ್ರಹ ಕೇಂದ್ರಗಳ ಸ್ಥಾಪನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಒಡಿಶಾ ಸರ್ಕಾರ 13 ವರ್ಷಗಳಲ್ಲಿ 3 ,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಕೇಂದ್ರ ಸರ್ಕಾರ ಕಳಿಸಿದ್ದ ಸಿಆರ್ ಪಿಎಫ್ ಹಾಗೂ ಬಿಎಸ್ ಎಫ್ ಪಡೆಗಳ 9 ತುಕಡಿಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ನಿಯೋಜಿಸಲಾಗಿದೆ. ಇಂಟಿಗ್ರೇಟೆಡ್ ಆಕ್ಷನ್ ಪ್ಲಾನ್ ಅಡಿಯಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳಾದ  ನುವಾಪಾಡ, ಬಲಂಗೀರ್ ಗೆ ಕಲಹಂಡಿ ಯಲ್ಲಿ 368 .72 ಕೋಟಿಗಳನ್ನು ಖರ್ಚು ಮಾಡಲಾಗಿದೆ. 2005 ರಿಂದ ಒಡಿಶಾದಲ್ಲಿ ನಕ್ಸಲ್ ವಿಧ್ವಂಸಕ ಕೃತ್ಯಗಳು ಕಡಿಮೆಯಾಗಿದೆ. ಅಧಿಕೃತ ಮಾಹಿತಿಗಳ ಪ್ರಕಾರ ನಕ್ಸಲರು ವಿಧ್ವಂಸಕ ಕೃತ್ಯ ನಡೆಸಿರುವ 919 ಪ್ರಕರಣಗಳು ವರದಿಯಾಗಿದ್ದು 184 ಭದ್ರತಾ ಸಿಬ್ಬಂದಿಗಳು, 259  ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಭದ್ರತಾ ಸಿಬ್ಬಂದಿಗಳು ಕೈಗೊಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 152 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಒಡಿಶಾ ವಿಧಾನಸಭೆಯಲ್ಲಿ ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗಳನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನವೀನ್ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT