ಸಾಂದರ್ಭಿಕ ಚಿತ್ರ 
ದೇಶ

ಹಿಂದೂ ಮುಸ್ಲಿಮರ ಕೋಮು ಸೌಹಾರ್ದದ ಪ್ರತೀಕ ಈ ಮದ್ರಸ ಶಾಲೆ

ಹಿಂದೆ ಮದ್ರಸವಾಗಿದ್ದ ಶಾಲೆ ಇಂದು ಮಾಡೆಲ್ ಸ್ಕೂಲ್ ಆಗಿ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿರುವ ಈ ಶಾಲೆಗೆ ಹಿಂದೂ...

ಜೈಪುರ : ಹಿಂದೆ ಮದ್ರಸವಾಗಿದ್ದ ಶಾಲೆ ಇಂದು ಮಾಡೆಲ್ ಸ್ಕೂಲ್ ಆಗಿ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿರುವ ಈ ಶಾಲೆಗೆ ಹಿಂದೂ ವ್ಯಕ್ತಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೈಪುರದ ರಾಮ್ ಗಂಜ್ ನಲ್ಲಿರುವ ಈ ಶಾಲೆ ಹಿಂದೂ ಮುಸ್ಲಿಮರ ಕೋಮು ಸೌಹಾರ್ದದ ಹೆಮ್ಮೆಯ ಪ್ರತೀಕವಾಗಿದೆ.

ಜೈಪುರದ ರೆಹಮಾನಿ ಮಾಡೆಲ್‌ ಸ್ಕೂಲ್‌ ತನ್ನ ಹೆಸರಿಗೆ ತಕ್ಕಂತೆ ದೇಶಕ್ಕೇ ಮಾದರಿಪ್ರಾಯವಾಗಿದೆ. ಎರಡು ದಶಕಗಳಷ್ಟು ಹಳೆಯದಾಗಿರುವ ರೆಹಮಾನಿ ಮಾಡೆಲ್‌ ಸ್ಕೂಲ್‌ ಹಿಂದೆ ಮದ್ರಸ ಶಾಲೆಯಾಗಿತ್ತು. ಈಗ ಅದು ಮಾಡೆಲ್‌ ಸ್ಕೂಲ್‌. ಈ ಮಾಡೆಲ್‌ ಸ್ಕೂಲ್‌ನಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಸುಮಾರು 1,300 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದರ ಪ್ರಾಂಶುಪಾಲರು ಓರ್ವ ಹಿಂದೂ.  ಇವರು ಆರ್ ಎಸ್ ಎಸ್ ಆದರ್ಶ ವಿದ್ಯಾಮಂದಿರದ ಪ್ರಾಂಶುಪಾಲರಾಗಿದ್ದರು.

ಶಾಲಾ ಆಡಳಿತ ಮಂಡಳಿ ಕೂಡ ಮುಸ್ಲಿಂ ಸದಸ್ಯರನ್ನೇ ಹೊಂದಿದೆ. ಇಲ್ಲಿನ ಶಿಕ್ಷಕರೆಲ್ಲಾ ಹಿಂದುಗಳು. ಶಾಲೆಯಲ್ಲಿ ಒಟ್ಟು 63 ಮಂದಿ ಶಿಕ್ಷಕರಿದ್ದಾರೆ. ಶಾಲೆಯು 1995ರಲ್ಲಿ ಮೊದಲ ಬಾರಿಗೆ ಮುಸ್ಲಿಮೇತರ ವ್ಯಕ್ತಿಯನ್ನು ಶಿಕ್ಷಕರನ್ನಾಗಿ ಪಡೆದಿತ್ತು. ಯಾದವ್‌ ಅವರು ಈ ಶಾಲೆಯ ಮೊತ್ತ ಮೊದಲ ಹಿಂದು ಪ್ರಾಂಶುಪಾಲರು.

ಶಿಕ್ಷಣ ಮಾತ್ರವಲ್ಲದೆ ಯಾದವ್‌ ಮತ್ತು ಅವರ ಶಿಕ್ಷಕ ತಂಡಕ್ಕೆ ಇಲ್ಲಿ ಹಲವು ವಿಧದ ಬಹು ದೊಡ್ಡ ಜವಾಬ್ದಾರಿಗಳಿವೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಕಡು ಬಡವರಾಗಿದ್ದು ಅವರ ಹೆತ್ತವರು ಮಕ್ಕಳನ್ನು ಯಾವ ಹೊತ್ತಿಗೂ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸುವವರಾಗಿದ್ದಾರೆ. ಆದರೆ ಆ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿ ಎಲ್ಲಿಂದಾದರೂ ಧನ ಸಹಾಯ ಒದಗಿಸುವ ಪ್ರಯತ್ನ ಮಾಡುವುದರಲ್ಲೇ ಯಾದವ್‌ ಮತ್ತು ಅವರ ತಂಡ ನಿರತವಾಗಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT