ದೇಶ

ಕಿರ್ಪಾಲ್ ಸಿಂಗ್'ನದ್ದು ಅನುಮಾನಾಸ್ಪದ ಸಾವಲ್ಲ, ಹತ್ಯೆ: ಸರಬ್ಜಿತ್ ಸಹೋದರಿ

Manjula VN

ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿ 20 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಅನಾಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿರುವ ಕಿರ್ಪಾಲ್ ಸಿಂಗ್ ಅವರ ಸಾವು ಅನುಮಾನಾಸ್ಪದ ಸಾವಲ್ಲ, ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸರಬ್ಜಿತ್ ಸಿಂಗ್ ಸಹೋದರಿ ಮಂಗಳಾರ ಹೇಳಿಕೊಂಡಿದ್ದಾರೆ.

ಕಿರ್ಪಾಲ್ ಸಿಂಗ್ ಅವರ ಸಾವು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಅವರು, ಕಿರ್ಪಾಲ್ ಸಿಂಗ್ ಅವರದ್ದು ಸಾಮಾನ್ಯ ಅಥವಾ ಅನುಮಾನಾಸ್ಪದ ಸಾವಲ್ಲ. ಅವರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ. ಸರಬ್ಜಿತ್ ಸಿಂಗ್ ಪ್ರಕರಣದಂತೆಯೇ ಕಿರ್ಪಾಲ್ ಸಿಂಗ್ ಪ್ರಕರಣದಲ್ಲೂ ಆಗಿದೆ. ಕಿರ್ಪಾಲ್ ರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಕಿರ್ಪಾಲ್ ಸಿಂಗ್ ಅವರ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕಿದೆ. ತನಿಖೆಗೆ ಭಾರತ ಸರ್ಕಾರ ಸಮಿತಿಯನ್ನು ರಚಿಸಿ ಸತ್ಯಾಂಶವನ್ನು ಹೊರತಬೇಕಿದೆ ಎಂದು ಹೇಳಿದ್ದಾರೆ.

ಭಾರತೀಯ ಪ್ರಜೆಯಾಗಿರುವ (50) ಕಿರ್ಪಾಲ್ ಸಿಂಗ್ ಅವರು 1992ರಲ್ಲಿ ಪಾಕಿಸ್ತಾನದ ಒಳಗಿನ ವಾಘ ಗಡಿಯನ್ನು ದಾಟಿ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಇದರಂತೆ ಪಂಜಾಬ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮರಣದಂಡನೆಯನ್ನು ವಿಧಿಸಲಾಗಿತ್ತು.

ಬೇಹುಗಾರಿಕೆ ಆರೋಪದಡಿ ಕಿರ್ಪಾಲ್ ಸಿಂಗ್ ಅವರು ಕಳೆದ 20 ವರ್ಷದಿಂದ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದರು. ಆದರೆ, ನಿನ್ನೆ ಲಾಹೋರ್ ನ ಕಾಟ್ ಲಖ್ಪತ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿತ್ತು.

SCROLL FOR NEXT