ನಾಗ್ಪುರ(ಮಹಾರಾಷ್ಟ್ರ): ಆರ್ ಎಸ್ ಎಸ್ ಭದ್ರ ಕೋಟೆ ನಾಗ್ಪುರದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಗುರುವಾರ ಚಪ್ಪಲಿ ಮತ್ತು ಶೂಗಳನ್ನು ಎಸೆದ ಘಟನೆ ನಡೆದಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕನ್ಹಯ್ಯ ಕುಮಾರ್ ಮೇಲೆ ಕೆಲ ಕಿಡಿಗೇಡಿಗಳು ಶೂ ಎಸೆದಿದ್ದಾರೆ.
ಕನ್ಹಯ್ಯಾ ವೇದಿಕೆಗೆ ಬರುತ್ತಿದ್ದಂತೆಯೇ ಕೆಲವರು ಶೂ ಮತ್ತು ಚಪ್ಪಲಿಗಳನ್ನು ಅವರತ್ತ ಎಸೆದು ಕನ್ಹಯ್ಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದಕ್ಕೆ ಪ್ರತಿಯಾಗಿ ಕನ್ಹಯ್ಯಾ ಕುಮಾರ್ ‘ಚಪ್ಪಲಿ ಎಸೆಯುವ ಮೂಲಕ ಎಂತಹ ದೇಶಪ್ರೇಮವನ್ನು ಪ್ರದರ್ಶಿಸುತ್ತಿದ್ದೀರಿ?’ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಕನ್ಹಯ್ಯಾ ಕುಮಾರ್ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಕಾರಿನ ಮೇಲೆ ಬಜರಂಗದಳ ಕಾರ್ಯಕರ್ತರೆಂದು ಆಪಾದಿಸಲಾದ ಕೆಲವರು ದಾಳಿ ನಡೆಸಿದರು ಎಂದು ವರದಿಯಾಗಿತ್ತು. ಪೊಲೀಸರು ಈ ದಾಳಿ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics