ಸಾಂದರ್ಭಿಕ ಚಿತ್ರ 
ದೇಶ

ದೇಶಾದ್ಯಂತ 91 ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರಿ ಇಳಿಕೆ

ದೇಶಾದ್ಯಂತ 91 ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರಿ ಇಳಿಕೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಬಿಡುಗಡೆ ಮಾಡಿರುವ...

ನವದೆಹಲಿ: ದೇಶಾದ್ಯಂತ 91 ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರಿ ಇಳಿಕೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದು ಬಂದಿದೆ. 
ಅದರಲ್ಲೂ ದಕ್ಷಿಣ ಭಾರತದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತಕಂಡಿದೆ. ಎಲ್ಲಾ ಜಲಾಶಯಗಳಲ್ಲೂ ನೀರಿನ ಪ್ರಮಾಣ ಶೇ.23ಕ್ಕಿಂತ ಕಡಿಮೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 
ದೇಶದ 91 ಜಲಾಶಯಗಳಿಂದ ಒಟ್ಟು ನೀರು ಸಂಗ್ರಹ ಪ್ರಮಾಣ 157.799 ಬಿಲಿಯನ್(ಬಿಸಿಎಂ)ನಷ್ಟು. ಆದರೆ ಇದೀಗ ಕೇವಲ 35.839 ಬಿಸಿಎಂನಷ್ಟು ಮಾತ್ರ ನೀರು ಸಂಗ್ರವಾಗಿದೆ. 
ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶ, ಪಂಜಾಬ್, ಪಶ್ಚಿಮಬಂಗಾಳ, ರಾಜಸ್ಥಾನ, ಜಾರ್ಖಂಡ್, ಒಡಿಶಾ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಚತ್ತೀಸ್ ಗಡ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದೆ. 
ದಕ್ಷಿಣ ಭಾರತದಲ್ಲಿ 31 ಜಲಾಶಯಗಳಿದ್ದು, ಇವುಗಳು ಒಟ್ಟು ನೀರು ಸಂಗ್ರಹ ಪ್ರಮಾಣ 51.59 ಬಿಸಿಎಂ(ಬಿಲಿಯನ್ ಕ್ಯೂಬಿಕ್ ಮೀಟರ್). ಆದರೆ ಇದೀಗ ಕೇವಲ 8.62 ಬಿಸಿಎಂನಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂದು ವರದಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕಕ್ಕೆ CWRC ನಂತರ CWMA ಶಾಕ್; ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ

3 ವರ್ಷ ಜೈಲು ಶಿಕ್ಷೆ ಫಿಕ್ಸ್: ರಾಜ್ಯಸಭೆ ಬಳಿಕ ಲೋಕಸಭೆಯಲ್ಲೂ 'ವಂದೇ ಮಾತರಂ' ಮಸೂದೆ ಅಂಗೀಕಾರ!

'ನಾನು ಬದುಕಬೇಕು, ಸಾಯೋದಕ್ಕೆ ಇಷ್ಟ ಇಲ್ಲ': ಕೃಷಿ ತಾಪಂಡ ವಿಚಾರದಲ್ಲಿ ಮೌನ ಮುರಿದ ಅರವಿಂದ್ ರೆಡ್ಡಿ; ಶಾಕಿಂಗ್ ಹೇಳಿಕೆ

ಕಾವೇರಿ ನೀರಿನ ವಿವಾದ: ಭಾನುವಾರ ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರಿಗೆ ಆಹ್ವಾನ!

ರೈಲಿನ ಮೇಲೆ ಬಿದ್ದ 11,000 ವೋಲ್ಟ್ ವಿದ್ಯುತ್ ತಂತಿ, ಶಾರ್ಟ್ ಸರ್ಕ್ಯೂಟ್; ಓಡಿದ ಪ್ರಯಾಣಿಕರು, Video Viral