ದೇಶ

ಅಕಾಲಿ ಸರ್ಕಾರ ಡ್ರಗ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ: ರಾಹುಲ್ ಗಾಂಧಿ

Lingaraj Badiger
ಝಿರಕ್ಪುರ್: ಪಂಜಾಬ್ ನಲ್ಲಿ ಅಕಾಲಿದಳ-ಬಿಜೆಪಿ ಸರ್ಕಾರ ಡ್ರಗ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ.
ಪಂಜಾಬ್ ನಲ್ಲಿ ಡ್ರಗ್ ಸಮಸ್ಯೆ ತುಂಬಾ ಗಂಭೀರವಾದ ವಿಷಯ. ಆದರೆ ಅಕಾಲಿ ಸರ್ಕಾರ ಇದನ್ನು ಸಂಪೂರ್ಣ ಕಡೆಗಣಿಸಿದೆ ಎಂದು ರಾಹುಲ್ ವರದಿಗಾರರಿಗೆ ತಿಳಿಸಿದ್ದಾರೆ.
ಮುಂದಿನ ವರ್ಷದ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನಾಯಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಲು ರಾಹುಲ್ ಗಾಂಧಿ ಇಂದು ಪಂಜಾಬ್ ಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, 2017ರಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ತಿಂಗಳಲ್ಲೇ ಡ್ರಗ್ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.
ಪಂಜಾಬ್ ದೇಶದ ಆತ್ಮ ಇದ್ದಂತೆ. ಪಂಜಾಬ್ ದೇಶಕ್ಕೆ ಜೀವ ನೀಡಿದೆ. ನನ್ನ ಹೃದಯದಲ್ಲಿ ಪಂಜಾಬ್ ಒಂದು ಸ್ಥಾನ ಇದೆ. ಹೀಗಾಗಿ ನಾನು ಪಂಜಾಬ್ ಸಹಾಯ ಮಾಡಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ಹೇಳಿದ್ದಾರೆ.
SCROLL FOR NEXT