6 ತಿಂಗಳಿಗೊಮ್ಮೆ ಪೈಲಟ್, ಸಹ ಪೈಲಟ್ ಗೆ ಸಾಮರ್ಥ್ಯ ಪರೀಕ್ಷೆ ಕಡ್ಡಾಯ
ಇನ್ನು ಮುಂದೆ 6 ತಿಂಗಳಿಗೊಮ್ಮೆ ಸರಕು ಸಾಗಣೆ ಹೆಲಿಕಾಪ್ಟರ್ ಮತ್ತು ವಿಮಾನ ಚಾಲನೆಯ ಪರವಾನಗಿ ಹೊಂದಿದ ಪೈಲಟ್ ಗಳು...
ನವದೆಹಲಿ: ಇನ್ನು ಮುಂದೆ 6 ತಿಂಗಳಿಗೊಮ್ಮೆ ಸರಕು ಸಾಗಣೆ ಹೆಲಿಕಾಪ್ಟರ್ ಮತ್ತು ವಿಮಾನ ಚಾಲನೆಯ ಪರವಾನಗಿ ಹೊಂದಿದ ಪೈಲಟ್ ಗಳು ಸಾರ್ಮರ್ಥ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ.
ಈ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ನಿಯಮವು ಸರಕು ಸಾಗಣೆ ಹೆಲಿಕಾಫ್ಟರ್ ಮತ್ತು ವಿಮಾನದ ಸಹ ಪೈಲಟ್ ಗೂ ಅನ್ವಯಿಸುತ್ತದೆ ಎಂದು ಹೇಳಿದೆ. 1937ರ ವಿಮಾನಯಾನ ನಿಯಮಕ್ಕೆ ನಾಗರಿಕ ವಿಮಾನಯಾನ ಇಲಾಕೆಯು ತಿದ್ದುಪಡಿ ತಂದಿದೆ.
ಈ ತಿದ್ದುಪಡಿ ನಿಯಮದ ಪ್ರಕಾರ ಪೈಲಟ್ ಮತ್ತು ಸಹ ಪೈಲಟ್ ಆರು ತಿಂಗಳಿಗೊಮ್ಮೆ ಸಾಮರ್ಥ್ಯ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.