ನವದೆಹಲಿ: ಬ್ರಿಟಿಷರ ಬಳಿಯಿರುವ ಕೊಹಿನ್ನೂರ್ ವಜ್ರವನ್ನು ವಾಪಸ್ ತರಬೇಕೆಂದು ಎಲ್ಲೆಡೆ ಒತ್ತಾಯ ಕೇಳಿ ಬರುತ್ತಿರುವಾಗಲೇ, ವಿದೇಶದಲ್ಲಿರುವ ಭಾರತದ ಎಲ್ಲ ಪಾರಂಪರಿಕ ವಸ್ತುಗಳನ್ನು ವಾಪಸ್ ತರಲೇ ಬೇಕು ಎಂದು ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಬ್ರಿಟನ್ ವಶದಲ್ಲಿರುವ ಕೊಹಿನ್ನೂರ್ ವಜ್ರವನ್ನು ವಾಪಸ್ ತರಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ಸರ್ಕಾರ ಮಂಗಳವಾರ ಭರವಸೆ ನೀಡಿತ್ತು.
ಬ್ರಿಟಿಷ್ ಸರ್ಕಾರ ಕೊಹಿನ್ನೂರ್ ವಜ್ರವನ್ನು ಬಲವಂತವಾಗಿ ತೆಗೆದುಕೊಂಡು ಹೋಗಿಲ್ಲ, ಪಂಜಾಬ್ ನ ಮಹಾರಾಜ ರಂಜಿತ್ ಸಿಂಗ್ ಅವರ ಪುತ್ರ ಮಹಾರಾಜ ದುಲೀಪ್ ಸಿಂಗ್ ಅವರು ಕೊಹಿನ್ನೂರ್ ವಜ್ರವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಸುಪ್ರೀಂ ಕೋರ್ಟ್‌ಗೆ ಹೇಳಿದ ಬೆನ್ನಲ್ಲೇ ಸರ್ಕಾರ ಈ ರೀತಿ ಪ್ರತಿಕ್ರಿಯೆ ನೀಡಿತ್ತು.
ಏತನ್ಮಧ್ಯೆ, ಬಿಜೆಪಿ ಸರ್ಕಾರ ಯು ಟರ್ನ್ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸರ್ಕಾರ ದ ಈ ನಿರ್ಧಾರಗಳು ಪ್ರಧಾನಿ ಕಚೇರಿ ಹಾಗೂ ಸರ್ಕಾರದ ಬಾಲಿಶತನವನ್ನು ತೋರಿಸುತ್ತದೆ ಎಂದಿದೆ.