ದೇಶ

ಕೊಲೆಗಡುಕರು ಬೋಧಕರಾಗುವುದು ಅಸಾಧ್ಯ: ವೆಂಕಯ್ಯ ನಾಯ್ಡು

Sumana Upadhyaya

ನವದೆಹಲಿ: ಹತ್ಯೆ ಮಾಡುವವರು ಬೋಧಕರಾಗಲು ಸಾಧ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿ ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ಆಪಾದಿಸಿದ್ದಕ್ಕೆ ಪ್ರತ್ಯುತ್ತರ ನೀಡುತ್ತಾ ಹೀಗೆ ಹೇಳಿದ್ದಾರೆ.
ಇ ಎಂ ಎಸ್ ನಂಬೂದರಿಪಾದ್ ಕಾಲದಿಂದ 100ಕ್ಕೂ ಹೆಚ್ಚು ಕಾಂಗ್ರೆಸ್ಸೇತರ ಸರ್ಕಾರವನ್ನು ವಜಾಗೊಳಿಸಿದ್ದ ಕಾಂಗ್ರೆಸ್, ಇದೀಗ ಬಿಜೆಪಿಯನ್ನು ಟೀಕಿಸುತ್ತಿದೆ. ಇದು ತುಂಬಾ ವಿಪರ್ಯಾಸ ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ನ್ನು ಪಕ್ಷಾಂತರದ ತಾಯಿ ಎಂದು ಟೀಕಿಸಿದ ಅವರು 1959ನೇ ಇಸವಿಯಲ್ಲಿ ಕೇರಳದಲ್ಲಿ ಜನರಿಂದ ಆಯ್ಕೆಗೊಂಡ ಇ ಎಂಎಸ್ ನಂಬೂದರಿಪಾದ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಅದನ್ನು ವಜಾ ಮಾಡಿತ್ತು ಎಂದು ನೆನಪಿಸಿದರು.

ಉತ್ತರಾಖಂಡ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿರುವ ಬಿಜೆಪಿ, ಕೇಂದ್ರದಲ್ಲಿ ಕಾಂಗ್ರೆಸ್, ಜನತಾ ಪಕ್ಷ ಮತ್ತು ಯುನೈಟೆಡ್ ಫ್ರಂಟ್ ಅಧಿಕಾರದಲ್ಲಿದ್ದಾಗ ರಾಷ್ಟ್ರಪತಿ ಆಡಳಿತಕ್ಕೆ ಒಳಗಾದ ರಾಜ್ಯಗಳನ್ನು ಉದಾಹರಿಸಿದೆ.

SCROLL FOR NEXT