ದೇಶ

ಸಿನಿಮಾ ಮಂದಿರಗಳಲ್ಲಿ ಮೋದಿ ಸರ್ಕಾರದ ಬಣ್ಣನೆ: ಶಿವಸೇನೆ ಟೀಕೆ

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ಮುಂದುವರಿಸಿರುವ ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮುನ್ನ ಮೋದಿ ಸರ್ಕಾರದ ಸಾಧನೆಗಳನ್ನ ಬಿಂಬಿಸುವ ದೃಶ್ಯಗಳನ್ನು ಪ್ರಸಾರ ಮಾಡುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.
 
ಮೋದಿ ಸರ್ಕಾರದ ಅಭಿವೃದ್ಧಿ ಚಿತ್ರಗಳನ್ನು ತೋರಿಸುವುದರಿಂದ ಪ್ರಯೋಜನವಾಗದು. ದೇಶದ ಶೇಕಡಾ 33ರಷ್ಟು ಪ್ರದೇಶಗಳು ಬರಗಾಲ ಎದುರಿಸುತ್ತಿದ್ದು, ಪರಿಹಾರ ಕಾರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ಇನ್ನು ಮುಂದೆ ಸಿನಿಮಾ ಮಂದಿರಗಳಲ್ಲಿ ಪ್ರತಿ ಸಲ ಚಿತ್ರ ಪ್ರದರ್ಶನಕ್ಕೆ ಮುನ್ನ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ತೋರಿಸಬೇಕೆಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿರುವುದಕ್ಕೆ ಪಕ್ಷದ ಮುಖವಾಣಿಯಲ್ಲಿ ಶಿವಸೇನೆ ತೀವ್ರವಾಗಿ ಟೀಕಿಸಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ದಿಯೋಕಾಂತ್ ಬರುವಾರವರು ನೀಡಿದ್ದ 'ಇಂಡಿಯಾ ಈಸ್ ಇಂದಿರಾ' ಹೇಳಿಕೆಗೆ ವೆಂಕಯ್ಯ ನಾಯ್ಡುರವರ ನರೇಂದ್ರ ಮೋದಿಯವರು ಭಾರತಕ್ಕೆ ದೇವರು ನೀಡಿದ ಕೊಡುಗೆ ಹೇಳಿಕೆಯನ್ನು ಶಿವಸೇನೆ ಹೋಲಿಕೆ ಮಾಡಿದೆ.

'' ಇದು ನೀವು ಮಾಡಿರುವ ಕೆಲಸವನ್ನು ತೋರಿಸುವ ಸಮಯವೇ? ಇದು ಶೈನಿಂಗ್ ಇಂಡಿಯಾ ಅಭಿಯಾನದ ತರಹ ಆಗಬಾರದು ಎಂದು ಸಂಪಾದಕೀಯದಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.

ಶಿವಸೇನೆ ಕೇಂದ್ರ ಎನ್ ಡಿಎ ಸರ್ಕಾರವನ್ನು ಟೀಕಿಸುತ್ತಿರುವುದು ಇದೇನು ಮೊದಲ ಸಲವಲ್ಲ. ಸರ್ಕಾರದ ಭಾಗವಾಗಿದ್ದರೂ ಕೂಡ 2014ರಿಂದ ಶಿವಸೇನೆಯನ್ನು ಬಿಜೆಪಿ ಪರಿಗಣಿಸುತ್ತಿರುವ ರೀತಿ ಅದಕ್ಕೆ ಇಷ್ಟವಾಗುತ್ತಿಲ್ಲ.

SCROLL FOR NEXT