ದೇಶ

ಕೇಜ್ರಿವಾಲ್‌ರನ್ನು 'ಸೈಕೋಪಾತ್ ಮುಖ್ಯಮಂತ್ರಿ' ಎಂದ ಪಪ್ಪು ಯಾದವ್

Rashmi Kasaragodu
ನವದೆಹಲಿ: ಲೋಕಸಭಾ ಎಂಎಲ್ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಸೋಮವಾರ ಸಮ ಬೆಸ ಸಂಖ್ಯೆಯ ವಾಹನ ಚಾಲನೆ ನಿಯಮದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮ ಬೆಸ ಯೋಜನೆಯು ಜನಪ್ರಿಯತೆಗಳಿಸಲು ಮಾಡಿದ ಗಿಮಿಕ್ ಎಂದು ದೂರಿದ ಪಪ್ಪು ಯಾದವ್, ಕೇಜ್ರಿವಾಲ್ ಅವರನ್ನು 'ಸೈಕೋಪಾತ್ ಮುಖ್ಯಮಂತ್ರಿ' ಎಂದು ಕರೆದಿದ್ದಾರೆ. 
ಕೆಳ ಮನೆಯ ಶೂನ್ಯವೇಳೆಯಲ್ಲಿ ಸಮ ಬೆಸ ನಿಯಮದ ಬಗ್ಗೆ ಮಾತೆತ್ತಿದ ಪಪ್ಪು ಯಾದವ್, ಈ ಯೋಜನೆಯಿಂದಾಗಿ ಸಿಎನ್‌ಜಿ ಕಂಪನಿ ಮತ್ತು ಬಸ್‌ನವರಿಗೆ ಲಾಭವಾಗುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಐಐಟಿ ಕಾನ್ಪುರ್ ನಡೆಸಿದ ಅಧ್ಯಯನವೊಂದರಲ್ಲಿ ಕಾರುಗಳು ಕೇವಲ ಶೇ. 5 ರಷ್ಟು ಮಾತ್ರ ಮಾಲಿನ್ಯ ಸೃಷ್ಟಿ ಮಾಡುತ್ತವೆ ಎಂದಿದೆ. ಹೀಗಿರುವಾಗ ಇನ್ನಿತರ ವಾಹನಗಳು  ಶೇ. 95ರಷ್ಟು ಮಾಲಿನ್ಯವನ್ನು ಸೃಷ್ಟಿಸುತ್ತಿವೆ. ಈ ಬಗ್ಗೆ ದೆಹಲಿಯ ಆಮ್ ಆದ್ಮಿ ಸರ್ಕಾರ ಯಾಕೆ ತಲೆ ಕೆಡಿಸಿಕೊಂಡಿಲ್ಲ? ಎಂದು ಪಪ್ಪು ಯಾದವ್ ಪ್ರಶ್ನಿಸಿದ್ದಾರೆ.
SCROLL FOR NEXT