ರಾಜ್ಯಸಭೆ (ಸಂಗ್ರಹ ಚಿತ್ರ) 
ದೇಶ

ರಾಜ್ಯ ಸಭೆಯಲ್ಲಿ ಮಾರ್ದನಿಸಿದ ಚಾಪರ್ ಹಗರಣ; ಆರೋಪ ತಳ್ಳಿ ಹಾಕಿದ ಸೋನಿಯಾ

ಬಹುಕೋಟಿ ಚಾಪರ್ ಹಗರಣ ಸಂಬಂಧ ಇಟಲಿ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಇತ್ತ ರಾಜ್ಯಸಭೆಯಲ್ಲಿಯೂ ಈ ವಿಚಾರ ವ್ಯಾಪಕ ಕೋಲಾಹಲಕ್ಕೆ ಕಾರಣವಾಗಿದೆ...

ನವದೆಹಲಿ: ಬಹುಕೋಟಿ ಚಾಪರ್ ಹಗರಣ ಸಂಬಂಧ ಇಟಲಿ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಇತ್ತ ರಾಜ್ಯಸಭೆಯಲ್ಲಿಯೂ ಈ ವಿಚಾರ ವ್ಯಾಪಕ ಕೋಲಾಹಲಕ್ಕೆ  ಕಾರಣವಾಗಿದೆ.

ಇಂದು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ಹಗರಣ ಸಂಬಂಧ ಕೇಳಿಬಂದಿದ್ದ ಎಲ್ಲ ಕಾಂಗ್ರೆಸ್ ನಾಯಕರ ಹೆಸರುಗಳನ್ನು  ಪ್ರಸ್ತಾಪಿಸಿದರು. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸುಬ್ರಮಣಿಯನ್ ಸ್ವಾಮಿಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಸುಗಮ ಕಲಾಪಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿ  ಪಡಿಸಿದ ಹಿನ್ನಲೆಯಲ್ಲಿ ಕಲಾಪ ಆರಂಭವಾಗ ಕೇವಲ ಒಂದು ಗಂಟೆ ಅವಧಿಯಲ್ಲಿ ಕಲಾಪವನ್ನು ಎರಡೆರಡು ಬಾರಿ ಮುಂದೂಡಲಾಯಿತು.

ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ತಮ್ಮ ವಿರುದ್ಧ ಎಲ್ಲ ಆರೋಪಗಳನ್ನು ತಳ್ಳಿಹಾಕಿದರು. ನನ್ನ ವಿರುದ್ಧ ಎಲ್ಲ ಆರೋಪಗಳು  ಸುಳ್ಳಾಗಿದ್ದು ತನಿಖೆಯಿಂದ ಸತ್ಯಾಂಶ ಹೊರ ಬೀಳಲಿದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಈ ಬಗ್ಗೆ ಮಾತನಾಡಿ ‘ಇಟಲಿ ಮತ್ತು ಭಾರತ ಪ್ರಧಾನಿಗಳ ಮಧ್ಯೆ ಪತ್ರಿಕಾ ವರದಿಗಳು ಹೇಳಿರುವಂತೆ ಸಭೆ ನಡೆದಿದೆಯೇ? ಏನಾದರೂ  ವ್ಯವಹಾರ ಕುದುರಿದೆಯೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಉಭಯ ದೇಶಗಳ ಪ್ರಧಾನಿಗಳ ಭೇಟಿಯ ವರದಿಗಳು ಸಂಪೂರ್ಣ ತಪ್ಪು ಎಂದು ಸ್ಪಷ್ಟನೆ  ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು ‘ತಪ್ಪಿತಸ್ಥ ಅಗಸ್ಟಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಸಂಸ್ಥೆಯ ರಕ್ಷಣೆಗೆ ಪ್ರಧಾನಿಯವರು ಮುಂದಾಗಿರುವುದೇಕೆ’ ಎಂದು   ಪ್ರತಿಭಟಿಸಿದರು.

ಕಾಂಗ್ರೆಸ್ ಗೆ ತಿರುಗೇಟು ನೀಡುವ ಸಲುವಾಗಿ ಬಿಜೆಪಿ ಸದಸ್ಯರೂ ಪ್ರತಿಭಟನೆ ನಡೆಸಿದ್ದರಿಂದ ಕಲಾಪ ಸ್ಥಗಿತವಾಗಿ ಕೋಲಾಹಲ ಆರಂಭವಾಯಿತು. ಒಂದು ಹಂತದಲ್ಲಿ ಕಾಂಗ್ರೆಸ್ ಸದಸ್ಯರು  ಸಭಾಪತಿಯವರ ಪೀಠದ ಬಳಿ ಧಾವಿಸಿ ಬಂದು ಘೋಷಣೆಗಳನ್ನು ಕೂಗಿದರು.

ಉತ್ತರಾಖಂಡ ರಾಷ್ಟ್ರಪತಿ ಆಳಿತ ವಿಚಾರವನ್ನು ಹಿಡಿದುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಇದೀಗ ಬಿಜೆಪಿ ಹೆಲಿಕಾಪ್ಟರ್ ಖರೀದಿ  ಪ್ರಕರಣವನ್ನು ಬಳಸಿಕೊಳ್ಳಲು ಮುಂದಾಗಿದೆ. ಚಾಪರ್ ಖರೀದಿ ಹಗರಣವಷ್ಟೇ ಅಲ್ಲದೆ ಬಿಜೆಪಿ ಮುಂದೆ ಕಾಂಗ್ರೆಸ್ ನ ಸಾಕಷ್ಟು ಹಗರಣಗಳ ಪಟ್ಟಿಯೇ ಇದ್ದು, ಏರ್ ಸೆಲ್ ಮ್ಯಾಕ್ಸಿಸ್ ಹಗರಣ  ಮತ್ತು ಇಶ್ರತ್ ಜಹಾಂ ಪ್ರಕರಣ ಮತ್ತು ಕಾರ್ತಿ ಚಿದಂಬರಂ ಅವರ ಅಕ್ರಮ ಆಸ್ತಿ ಪ್ರಕರಣಗಳನ್ನು ಸಂಸತ್ತಿನಲ್ಲಿ ಬಳಸಿಕೊಳ್ಳಲು ಈ ಹಿಂದೆ ಬಿಜೆಪಿ ತೀರ್ಮಾನಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT