ಟಿಡಿಪಿ ಗೆ ಸೇರಿದ ಮತ್ತೊಬ್ಬ ವೈಎಸ್ ಆರ್ ಕಾಂಗ್ರೆಸ್ ಶಾಸಕ
ಆಂಧ್ರ ಪ್ರದೇಶದ ಶ್ರೀಶೈಲಂ ಶಾಸಕ ಬುದ್ದ ರಾಜಶೇಖರ ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ತೊರೆದು ಚಂದ್ರ ಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಪಕ್ಷಾಂತರಗೊಂಡಿದ್ದಾರೆ..
ವಿಜಯವಾಡ: ಆಂಧ್ರ ಪ್ರದೇಶದ ಶ್ರೀಶೈಲಂ ಶಾಸಕ ಬುದ್ದ ರಾಜಶೇಖರ ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ತೊರೆದು ಚಂದ್ರ ಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಪಕ್ಷಾಂತರಗೊಂಡಿದ್ದಾರೆ.
ಇಂದು ಬೆಳಗ್ಗೆ 9.5 ನಿಮಿಷದ ಶುಭ ಮೂಹೂರ್ತದಲ್ಲಿ ರಾಜಶೇಖರ್ ರೆಡ್ಡಿ ಟಿಡಿಪಿ ಮುಖ್ಯಸ್ಥ ಚಂದ್ರ ಬಾಬು ನಾಯ್ಡು ಅವರನ್ನು ಅವರ ರಿವರ್ ಫ್ರಂಟ್ ನಿವಾಸದಲ್ಲಿ ಭೇಟಿ ಮಾಡಿ ಪಕ್ಷ ಸೇರಿದರು.
ಈ ವೇಳೆ ರಾಜಶೇಖರ್ ಅವರಿಗೆ ಆಡಳಿತಾರೂಢ ಪಕ್ಷದ ಗುರುತಾದ ಹಳದಿ ಶಾಲನ್ನು ನೀಡಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಈಗಾಗಲೇ ವೈ ಎಸ್ ಆರ್ ಕಾಂಗ್ರೆಸ್ ನ ಹಲವು ಶಾಸಕರು ಟಿಡಿಪಿ ಸೇರಿದ್ದಾರೆ.
ರಾಜಶೇಖರ ರೆಡ್ಡಿ ಕರ್ನೂಲಿನ ವೈಎಸ್ ಆರ್ ಸಿಯ ಜಿಲ್ಲಾ ಘಟಕದ ಅಧ್ಯ.ಕ್ಷರೂ ಕೂಡ ಆಗಿ ನೇಮಕ ಗೊಂಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.