ಸಾಂದರ್ಭಿಕ ಚಿತ್ರ 
ದೇಶ

ಕ್ಯಾಂಡಲ್ ಆರಿಸದೇ ಮಲಗಿದ್ದೇ ಮುಳುವಾಯ್ತು: ಬರೇಲಿಯಲ್ಲಿ ಆರು ಮಕ್ಕಳು ಸಜೀವ ದಹನ

ಕ್ಯಾಂಡಲ್ ನಿಂದಾಗಿ ಮನೆಗೆ ಹಬ್ಬಿದ ಬೆಂಕಿಯಿಂದ ಆರು ಮಂದಿ ಸಜೀವ ದಹನವಾಗಿರುವ ಘಟನೆ ಇಂದು ಬೆಳಗ್ಗೆ ಬರೇಲಿಯಲ್ಲಿ ನಡೆದಿದೆ....

ಬರೇಲಿ: ಕ್ಯಾಂಡಲ್ ನಿಂದಾಗಿ ಮನೆಗೆ ಹಬ್ಬಿದ ಬೆಂಕಿಯಿಂದ ಆರು ಮಕ್ಕಳು ಸಜೀವ ದಹನವಾಗಿರುವ ಘಟನೆ ಇಂದು ಬೆಳಗ್ಗೆ ಬರೇಲಿಯಲ್ಲಿ ನಡೆದಿದೆ.

ಖ್ವಿಲಾ ಪೊಲೀಸ್ ಠಾಣೆಯ ಕಾಳಿ ದಾಮ್ ದೇವಾಲಯ ಪ್ರದೇಶದಲ್ಲಿ ವಾಸವಿದ್ದ ರಾಜು ಕಶ್ಯಪ್ ಎಂಬುವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ರಾಜು ಕಶ್ಯಪ್ ಮತ್ತು ಆತನ ಪತ್ನಿ ಸಂಬಂಧಿಕರ ವಿವಾಹಕ್ಕಾಗಿ ಫಿಲಿಬಿತ್ ಗೆ ತೆರಳಿದ್ದರು. ಈ ವೇಳೆ ನಾಲ್ಕು ಸಹೋದರಿಯರು ಮತ್ತವರ ಇಬ್ಬರು ಸೋದರ ಸಂಬಂಧಿಗಳು ಮನೆಯಲ್ಲಿದ್ದರು. ನಿನ್ನೆ ಮಲಗುವ ಮುನ್ನ ಕ್ಯಾಂಡಲ್ ಆರಿಸದಿದ್ದದ್ದು ಅವಘಡಕ್ಕೆ ಕಾರಣವಾಗಿದೆ.

ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಹೊಗೆ ಹಾಗೂ ಬೆಂಕಿಯನ್ನು ನೋಡಿ ಆರು ಮಂದಿಯೂ ಹೊರಗೆ ಬರಲು ಹರಸಾಹಸ ಪಟ್ಟಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಬಾಗಿಲು ಮುರಿದು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಛಾವಣಿ ಕುಸಿದು ಆರು ಜನ ಸಜೀವ ದಹನವಾಗಿದ್ದಾರೆ. ಸಲೋನಿ(17), ಸಂಜನಾ(15), ಬೂರಿ(10), ದುರ್ಗಾ(8), ಮಹಿಮಾ(9), ದೆಬು(7) ಮೃತ ದುರ್ದೆವಿಗಳು.

ಮೃತ ದೇಹಗಳನ್ನು ಶವಪರೀಕ್ಷೆಗಾಗಿ ಕೊಂಡಯ್ಯಲಾಗಿದೆ ಎಂದು ಖ್ವಿಲಾ ಪೊಲೀಸ್ ಠಾಣೆಯ ಎಸ್ಪಿ ಸಮೀರ್ ಸೌರವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!