ದೇಶ

ನೇತಾಜಿ ಸುಭಾಷ್ ಚಂದ್ರ ಬೋಸ್‌ಗೆ ಸಂಬಂಧಿಸಿದ 25 ಕಡತಗಳ ಬಿಡುಗಡೆಗೆ ಕ್ಷಣಗಣನೆ

Rashmi Kasaragodu
ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 25 ಕಡತಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಲಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಬೋಸ್ ಅವರಿಗೆ ಸಂಬಂಧಪಟ್ಟ 25 ಕಡತಗಳನ್ನು ಸಾಂಸ್ಕೃತಿಕ ಖಾತೆ ಸಚಿವ ಮಹೇಶ್ ಶರ್ಮಾ  ಬಿಡುಗಡೆ ಮಾಡಲಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವೆ. 
ಕಳೆದ ತಿಂಗಳು ಬೋಸ್‌ಗೆ ಸಂಬಂಧಪಟ್ಟ 50 ಕಡತಗಳನ್ನು www.Netajipapers.Gov.In.
 ಪೋರ್ಟಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.  ಜನವರಿ 23 ರಂದು ನೇತಾಜಿ ಅವರ 119ನೇ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ನೂರರಷ್ಟು ರಹಸ್ಯ ಕಡತಗಳನ್ನು ಬಹಿರಂಗ ಪಡಿಸಿದ್ದರು.
ಆದಾಗ್ಯೂ, ನೇತಾಜಿಗೆ ಸಂಬಂಧಪಟ್ಟ ಎರಡು ಪ್ರಧಾನ ಕಡತಗಳನ್ನು ಈ ವರ್ಷಾಂತ್ಯದಲ್ಲಿ ಜಪಾನ್ ಬಿಡುಗಡೆಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಜಪಾನ್ ಬಳಿಯಿರುವ ಇನ್ನೂ ಮೂರು ಕಡತಗಳನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಜಪಾನ್‌ನಿಂದ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗಿದೆ.
SCROLL FOR NEXT