ನವದೆಹಲಿ: ದೇಹದ ತೂಕ ಏರಿರುವುದರಿಂದ ಫಿಟ್ನೆಸ್ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಪೊಲೀಸರ ಸಾಮಾನ್ಯ ದೂರು. ಇದಕ್ಕೆ ಪರಿಹಾರ ನೀಡಲು ಮುಂದಾಗಿರುವ ದೆಹಲಿ ಪೊಲೀಸ್ ಇಲಾಖೆ ಪೊಲೀಸರಿಗೆ ಯೋಗಾಭ್ಯಾಸ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಅತಿಯಾದ ಕೆಲಸದ ಒತ್ತಡದಿಂದ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲವಾದ ಕಾರಣ ಪೊಲೀಸರಿಗೆ ಯೋಗಾಭ್ಯಾಸದ ತರಬೇತಿ ನೀಡುವಂತೆ, ಪತ್ರ ಬರೆದ ನಂತರ ದೆಹಲಿ ಪೊಲೀಸ್ ಇಲಾಖೆ ಎಲ್ಲಾ ಠಾಣೆಗಳಲ್ಲೂ ಯೋಗಾಭ್ಯಾಸ ಕಡ್ಡಾಯಗೊಳಿಸಿದೆ.
ದೆಹಲಿ ಪೊಲಿಸ್ ಇಲಾಖೆ ಆದಷ್ಟು ಶೀಘ್ರವೇ ಪೊಲೀಸರಿಗೆ ಯೋಗ ಶಿಕ್ಷಣ ಪ್ರಾರಂಭಿಸಲು ಸೂಚನೆ ನೀಡಿದೆ. ಪೊಲೀಸರಿಗೆ ಯೋಗ ಶಿಕ್ಷಣ ತರಬೇತಿ ನೀಡಲು ಬಾಬಾ ರಾಮ್ ದೇವ್ ಅವರನ್ನು ಸಂರ್ಪಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸರಿಗೆ ಯೋಗ ತರಬೇತಿ ನೀಡುವಂತೆ ಮತ್ತು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಯೋಗಭ್ಯಾಸ ಕಡ್ಡಾಯಗೊಳಿಸುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ಎಲ್ಲಾ ಪೊಲೀಸರಿಗೆ ಯೋಗಾಭ್ಯಾಸದ ತರಬೇತಿ ನೀಡಬೇಕು. ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಯೋಗ ತರಬೇತಿ ನೀಡಲು ವಾರ್ಷಿಕ 7 ಲಕ್ಷ ರೂ ಅನುದಾನ ನೀಡಲಿದೆ.