ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ: ನ್ಯಾಯಂಗ ತನಿಖೆಗೆ ಮಹಾ ಸರ್ಕಾರ ಆದೇಶ
ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಸುಕಿನ ಜಾವ ಸಂಭವಿಸಿದ ಸೇತುವೆ ಕುಸಿತ ಘಟನೆಯನ್ನು ಮಹಾರಾಷ್ಟ್ರ...
ಮುಂಬೈ: ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಸುಕಿನ ಜಾವ ಸಂಭವಿಸಿದ ಸೇತುವೆ ಕುಸಿತ ಘಟನೆಯನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಸಾವಿತ್ರಿ ನದಿಯಲ್ಲಿ ಕೊಚ್ಚಿ ಹೋದ ಬಸ್ಸಿನ ಚಾಲಕ ಮತ್ತು ಮಹಿಳೆಯೊಬ್ಬರ ಶವಗಳನ್ನು ಇಂದು ಬೆಳಗ್ಗೆ ಹೊರತೆಗೆಯಲಾಗಿದ್ದು, ಈ ಮೂಲಕ ಸಾವಿಗೀಡಾದವರ ಸಂಖ್ಯೆ 4ಕ್ಕೇರಿದೆ. ನಿನ್ನೆ ಎರಡು ಮೃತದೇಹಗಳು ಸಿಕ್ಕಿದ್ದವು.
ರಾಯಘಡ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಕಾಶ್ ಮೆಹ್ತಾ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಎರಡು ಬಸ್ಸುಗಳು ಮತ್ತು 5ರಿಂದ 6 ಖಾಸಗಿ ಬಸ್ಸುಗಳು ಕಣ್ಮರೆಯಾಗಿವೆ. ಪ್ರವಾಹ ತೀವ್ರವಾಗಿದ್ದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದರು.
ನೀರಿನಲ್ಲಿ ಕೊಚ್ಚಿ ಹೋದ ಬಸ್ಸುಗಳಲ್ಲಿ ಒಂದು ಜೈಗಡ್ ನಿಂದ ಮುಂಬೈಗೆ ಮತ್ತು ಇನ್ನೊಂದು ರಜಪುರ್ ನಿಂದ ಬೊರಿವಲಿಗೆ ಪ್ರಯಾಣಿಸುತ್ತಿತ್ತು.
ಕೇಂದ್ರ ವಿಪತ್ತು ರಕ್ಷಣಾ ಪಡೆ ಪುಣೆಯಿಂದ ನಿನ್ನೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಮತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆ ಭಾರೀ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.