ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಕ್ಷಕ್ಕೆ ನಿಷ್ಠನಾಗಿ ಜಿಎಸ್ ಟಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ: ಸುಬ್ರಹ್ಮಣ್ಯನ್ ಸ್ವಾಮಿ

ಸರಕು ಮತ್ತು ಸೇವಾ ತೆರಿಗೆ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ನಿನ್ನೆ ಒಪ್ಪಿಗೆ ನೀಡಿದ ನಂತರ ಇಂದು...

ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ(ಸಂಗ್ರಹ)
Sumana Upadhyaya
Updated On : 4 Aug 2016, 12:42 pm
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ನಿನ್ನೆ ಒಪ್ಪಿಗೆ ನೀಡಿದ ನಂತರ ಇಂದು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ, ಶಾಸನದ ಧನಾತ್ಮಕ ಅಂಶಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾಕೆಂದರೆ ಇದು ಅರ್ಥಶಾಸ್ತ್ರದ ಬಗ್ಗೆ ಇರುವ ತಮ್ಮ ಪಾಂಡಿತ್ಯಪೂರ್ಣ ಬದ್ಧತೆ ಮತ್ತು ಪಕ್ಷದ ಮೇಲಿನ ನಿಷ್ಠೆಯ ನಡುವಿನ ಸಂಘರ್ಷ ಎಂದು ಹೇಳಿದ್ದಾರೆ.
ಇಂದು ಟ್ವೀಟ್ ಮಾಡಿರುವ ಅವರು, ಉದ್ದೇಶಿತ ಜಿಎಸ್ ಟಿ ಸಾಂವಿಧಾನಿಕ ತಿದ್ದುಪಡಿಯಲ್ಲಿ ಏನಾದರೂ ಪಿಟಿ (ಪಾಟ್ರಿಯಾಟಿಕ್ ಟ್ವೀಪಲ್) ಅಧ್ಯಯನವಿದೆಯೇ? ಜಿಎಸ್ ಟಿಎನ್ ನ ವ್ಯಾಪ್ತಿ ಮತ್ತು ಪಾತ್ರವೇನು ಎಂದು ಟ್ವೀಟ್ ಮಾಡಿದ್ದಾರೆ.
ಇಲ್ಲಿ ಸುಬ್ರಹ್ಮಣ್ಯನ್ ಸ್ವಾಮಿಯವರು ಪಾಟ್ರಿಯಾಟಿಕ್ ಟ್ವೀಪಲ್ ಗೆ ಪಿಟಿ ಎಂದು ಬಳಸಿದ್ದಾರೆ. ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ನೆಟ್ ವರ್ಕ್ ಗೆ ಸಂಕ್ಷಿಪ್ತವಾಗಿ ಜಿಎಸ್ ಟಿಎನ್ ಎಂದು ಬಳಸಿದ್ದಾರೆ.

Advertisement

Advertisement

ಟ್ವಿಟ್ಟರ್ ನಲ್ಲಿ ಸ್ವಾಮಿಯವರ ಒಬ್ಬ ಅನುಯಾಯಿ ಯಾಕೆ ನೀವು ಸರಕು ಮತ್ತು ಸೇವಾ ತೆರಿಗೆ ಮಸೂದೆ ಬಗ್ಗೆ ನಿಮ್ಮ ಅಭಿಪ್ರಾಯವನು, ದೇಶದ ಆರ್ಥಿಕತೆ ಮೇಲೆ ಅದರ ಪರಿಣಾಮವೇನು ಎಂದು ಏಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಳಿದ್ದಕ್ಕೆ ಅವರು, ನಾನು ಮೌನವಾಗಿದ್ದೇನೆ ಏಕೆಂದರೆ ಅರ್ಥಶಾಸ್ತ್ರದ ಮೇಲೆ ತಮಗಿರುವ ಬದ್ಧತೆ ಮತ್ತು ಪಕ್ಷ ನಿರ್ಧರಿಸುವ ವಿಷಯಗಳಿಗೆ ತಮ್ಮ ಸ್ವಾಮಿನಿಷ್ಠೆಯಲ್ಲಿ ವೈರುಧ್ಯವಿದೆ ಎಂದರು.
ಜಿಡಿಪಿಯನ್ನು ಹೆಚ್ಚಿಸಲು ಅರ್ಥಶಾಸ್ತ್ರಜ್ಞರಿಗೆ ಇದುವರೆಗೆ ಗೊತ್ತಿರುವ ವಿಷಯವೊಂದೇ, ಅದು ಹೆಚ್ಚಿನ ಹೂಡಿಕೆ ಮತ್ತು ಏರಿಕೆಯಾಗಿರುವ ಬಂಡವಾಳ ಮತ್ತು ಕಾರ್ಮಿಕ ಉತ್ಪಾದನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಮಟ್ಟದಲ್ಲಿ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ವಿಧಾನವಿದ್ದು ಅದನ್ನು ತೆಗೆದುಹಾಕಿ ದೇಶಾದ್ಯಂತ ಏಕರೂಪ ತೆರಿಗೆ ವಿಧಾನ ಜಾರಿಗೆ ತರುವುದರಿಂದ ನಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನ ಶೇಕಡಾ 2ರಷ್ಟು ಹೆಚ್ಚಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments